ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ. ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು. ನಾನು ಈ [...]
Archive for February, 2008
ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು… ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ [...]