ನನಗೆ ಕ್ರಿಕೆಟ್ ಅಂದರೆ ಆರನೇ ಪ್ರಾಣ. ಪಂಚಪ್ರಾಣಗಳ ನಂತರದ ಸ್ಥಾನ ಅದಕ್ಕೇ. ಒಂದೇ ಕೊರತೆ ಅಂದ್ರೆ ಆಡಲಿಕ್ಕೆ ಬರೋಲ್ಲ! ಬೌಲಿಂಗ್ ಗೆ ನಿಂತರೆ ಎದುರಾಳಿಗಳಿಗೆ ಸುಗ್ಗಿ, ಬ್ಯಾಟಿಂಗ್ ಗೆ ಇಳಿದ್ರೆ, ನಮ್ಮವರಿಗೆ ಕಿರಿಕಿರಿ.ಆದರೂ ನಮ್ಮ ಟೀಮಿನ ಆಡದ ನಾಯಕ ನಾನು! ಹಾಗಂತ ಅವರೇನೂ ಸುಮ್ ಸುಮ್ನೆ ನನ್ನನ್ನ ನಾಯಕ ಮಾಡಿರ್ಲಿಲ್ಲ. ನಾನು ನಿಜವಾಗ್ಲೂ ಸ್ಟ್ರ್ಯಾಟಜಿ ಎಕ್ಸ್ ಪರ್ಟ್ ಆಗಿದ್ದೆ. ಯಾರಿಗೆ ಯಾವಾಗ ಬೌಲಿಂಗ್ ಕೊಡಬೇಕು? ಯಾರ ಕೈಗೆ ಬ್ಯಾಟ್ ಕೊಡಬೇಕು, ಯಾರಿಗೆ ಎಲ್ಲಿ ಚೆಂಡೆಸೆದರೆ ಮುಗ್ಗರಿಸುತ್ತಾರೆ? ಇವೆಲ್ಲವನ್ನೂ [...]
Archive for the ‘ಗಂಡಸ್ರ ಗೋಳು!’ Category
ಚಂದಿರ ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ. ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… [...]