ನವೆಂಬರ್ ೧, ಕನ್ನಡಿಗರ ಹೆಮ್ಮೆಯ ದಿನ. (ಹೊಸತಾಗಿ ಹೇಳ್ತಿದ್ದೀನಿ ಅಂತ ಬೈಕೊಳ್ಬೇಡಿ ಮತ್ತೆ!) ಪತ್ರಿಕೆಗಳಲ್ಲಿ ವಾರಕ್ಕೊಂದು ದಿನ ವಿಶೇಷ ಬರಹಗಳಿಗೆ, ಸಾಹಿತ್ಯಕ್ಕೆ, ಕತೆ-ಕವನ-ಪ್ರಬಂಧಗಳಿಗೆ ಮೀಸಲು. ಆದ್ರೆ ಈ ಬ್ಲಾಗವತಾರದಿಂದಾಗಿ ನಿತ್ಯವೂ ಒಂದಲ್ಲ ಒಂದು ಕೀಪ್ಯಾಡಿನಿಂದ ಹೊಸತೊಂದು ಕೃತಿ ಮೂಡಿಬರುತ್ತಿದೆ. ಹಾಗೆ ಬರುತ್ತಿರುವುದರಲ್ಲಿ ಶೇ. ೧೦ ಗಟ್ಟಿ ಬರಹಗಳು ಅಂದುಕೊಂಡರೂ, ಕನ್ನಡ ಬರಹ ಜಗತ್ತು ಶ್ರೀಮಂತವಾಗುತ್ತಿದೆ ಅಂತ ಹೇಳಲಡ್ಡಿಯಿಲ್ಲ. ಈ ಬ್ಲಾಗಿಗರಲ್ಲಿ ಸಿಲಿಕಾನ್ ಕಣಿವೆಯ ಕಂದಮ್ಮಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಇನ್ನುಳಿದಂತೆ ಹೊರನಾಡ ಕನ್ನಡಿಗರು, ಪರದೇಶಗಳಲ್ಲಿ ಕಳೆದುಹೋಗಬಾರದೆಂದು ನಿರ್ಧರಿಸಿ [...]
Archive for the ‘ಸಂವಹನ’ Category
ಮಹಾಭಾರತದ ನಾಯಕ ಯಾರು? ಕೇಳಿ ನೋಡಿ. ಶ್ರೀಕೃಷ್ಣನಿಂದು ಹಿಡಿದು ಯುಧಿಷ್ಟಿರ, ಭೀಮ, ದುರ್ಯೋಧನರವರೆಗೆ ಒಬ್ಬೊಬ್ಬರು ಒಂದೊಂದು ಹೆಸರು ಹೇಳಿಕೊಂಡು ಬರ್ತಾರೆ. ಅದರೆ, ನಾಯಕಿ? ದ್ರೌಪದಿ! ಊಹೂಂ… ಎರಡು ಮಾತೇ ಇಲ್ಲ. ಕೃಷ್ಣ ಮಹಾಭಾರತದ ಸೂತ್ರಧಾರನಾದರೆ, ದ್ರೌಪದಿ ಅದರ ಕ್ರಿಯಾಶಕ್ತಿ. ತಮಗಾದ ಅನ್ಯಾಯವನ್ನು ಪ್ರತಿಭಟಿಸ್ತ, ಅದಕ್ಕೆ ಪ್ರತೀಕಾರ ತೀರಿಸುತ್ತ, ಗೋಳಾಟ, ಸ್ವಾನುಕಂಪಗಳಿಲ್ಲದೆ ಅದನ್ನ ತನಗೆ ತಾನೆ ನಿಭಾಯಿಸುತ್ತ ಅದೆಷ್ಟೋ ದ್ರೌಪದಿಯರು ಅಗಿ ಹೋಗಿದ್ದಾರೆ, ಆಗುತ್ತಲೇ ಇದ್ದಾರೆ, ಮುಂದೂ ಆಗುತ್ತಿರುತ್ತಾರೆ, ನಮ್ಮಂಥ ದುರ್ಯೋಧನ- ಧರ್ಮರಾಯರಿರುವವರೆಗೂ. ಛೆ! ಈಗ ಪರಿಸ್ಥಿತಿ ತೀರಾ ಹಾಗೇನಿಲ್ಲ ಬಿಡಿ!! [...]