ಇದೊಂದು ಸಾರಿ ಕ್ಷಮಿಸಿಬಿಡು ಗೆಳೆಯಾ, ಇದು ನನ್ನ ಕೊನೆಯ ವಂಚನೆ! ನಿನ್ನ ಜಾದೂ ಪೆಟ್ಟಿಗೆಯ ಕುದುರೆ ಮತ್ತೆಂದೂ ನಗುವುದಿಲ್ಲ ನಂಬು, ನನ್ನಾಣೆ. ಏನು ಮಾಡಲಿ ಹೇಳು, ಗೆಳೆಯಾ, ಹೃದಯ ಹಾಳು ಹೆಣ್ಣು! ನಿನ್ನ ತಿಳಿ ಮನಸಿಗೆ ನೂರೆಂಟು ಕಲ್ಲು ಸಾಕು, ಎಸೆಯಲಾರೆ ಮತ್ತೆಂದೂ ನೋವ ನಾನು. ಏಕಾಗುವುದು ಮತ್ತೆ ಮತ್ತೆ ಗೆಳೆಯಾ, ಹೀಗೆ ನನ್ನಿಂದಲೇ ತಪ್ಪು? ನಾ ಕಲಿತ ಪಾಠವೇ ಹಾಗಿತ್ತು ಬಹುಶಃ ದಂಡಿಸದೆ ತಿದ್ದಿ ತೀಡಿ ಒಮ್ಮೆ ನನ್ನನಪ್ಪು.
Archive for the ‘ಹೀಗೇ ಸುಮ್ನೆ..’ Category
ನಿನ್ನೆದೆಯಲ್ಲಿ ಮುಖವಿಟ್ಟಾಗ ಒಳಗೆಲ್ಲ ಏನೊ ಅರಳಿದ ಸದ್ದು. ನಿದ್ದೆಯ ಮಗು ನಕ್ಕ ಹಾಗೆ, ಹಾಗೇ ಸಣ್ಣ ನಿರುಮ್ಮಳ. ಕೂದಲ ನಡುವೆ ಬೆರಳು ತೂರಿ ನೀ ನನ್ನ ತಲೆಯನುಜ್ಜುವಾಗ ಸಾವಿರ ದಳದ ಮೊಗ್ಗು ಬಿರಿದು, ಸಹಸ್ರಾರ ಚಟಪಟ. ಜಗದ ಬೆರಗು ಹರಿಯುವಂತೆ ತುಳುಕುತ್ತ ನಗುವ ನಿನ್ನ ಗಂಡೆದೆ ಹೀಗೆ, ಅಮ್ಮನ ತೊಡೆಯ ಹಾಗೆ…
ಆಫೀಸಿಂದ ಹೊರಟು ನಿಂತರೆ ಸದಾ ಗಿಜಿಗುಡೋ ರಸ್ತೆ ಬಿಕೋ ಅಂತ ಅಂಗಾತ ಬಿದ್ದುಕೊಂಡಿತ್ತು. ಒಂದರೆ ಗಳಿಗೆಯಲ್ಲಿ ವಯಸ್ಸಾದ ರಾಜಕಾರಣಿಗಳೆಲ್ಲ ಕಣ್ಣೆದುರು ಹಾದುಹೋದರು. ಸಾಲದ್ದಕ್ಕೆ ರಾಮಸೇತು ಗಲಾಟೆ ಬೇರೆ. ರಾಮ ರಾಮಾ…ಅಂದುಕೊಳ್ತಲೇ ಆಗೊಂದು ಈಗೊಂದು ಭರ್ರೆದು ಕುಂಡೆ ತಿರುಗಿಸಿ ಹೋಗ್ತಿದ್ದ ಆಟೋಗಳಿಗೆ ಕೈಯ್ಯೊಡ್ಡುತ್ತ ನಿಂತೆ. ಮಿನಿಮಮ್ ದೂರದ ಮನೆಗೆ ಇಪ್ಪತ್ತು ಕೊಡಿ ಅಂತ ನಖರಾ ಆಡ್ತಿದ್ದವರಿಗೆಲ್ಲ ಹೆಂಡ್ತಿ ಲಟ್ಟಣಿಗೇಲಿ ಬಡೀಲಿ ಅಂತ ಶಾಪ ಹಾಕ್ತಾ, ಎಲ್ಲಾದಕ್ಕೂ “ಹೇಣ್ತಿ ಹೆಣ್ ಹಡಿಯಾ” ಅಂತ ಬೈತಿದ್ದ ಮಾವನ್ನ ನೆನೆಸ್ಕೊಂಡು ಅವರಿಗೆ ತಕ್ಕ ಅಳಿಯನಾಗ್ತಾ, [...]