ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ.

ತರೈನ್ನ ಮೊದಲ ಯುದ್ಧ ಅದು. ಪೃಥ್ವಿರಾಜ್ ಚೌಹಾನ್ ಮಹಮ್ಮದ್ ಘೋರಿಯನ್ನು ಸೋತು ಸುಣ್ಣವಾಗಿಸಿ ಕಾಲಿಗೆ ಕೆಡವಿಕೊಂಡಿದ್ದ. ಘೋರಿ ಮಂದಿರಗಳನ್ನು ಧ್ವಂಸ ಮಾಡುವ, ಹಿಂದೂಗಳ ಮೇಲೆ ಅತ್ಯಾಚಾರದ ಸರಣಿಯನ್ನೇ ನಡೆಸುವ ಕ್ರೂರಿ ಎಂಬುದು ಗೊತ್ತಿದ್ದಾಗಲೂ ಪೃಥ್ವಿರಾಜ್ ಅವನನ್ನು ಕ್ಷಮಿಸಿ ಬಿಟ್ಟುಬಿಟ್ಟ.
ತನ್ನ ತೆಕ್ಕೆಗೆ ಉಡುಗೊರೆಯಾಗಿ ಬಂದ ಮುಸ್ಲೀಂ ಹೆಣ್ಣುಮಗಳನ್ನು ಮಾನಭಂಗ ನಡೆಸಿ ಅವರಂತೆ ಕ್ರೂರವಾಗಿ ನಡೆದುಕೊಳ್ಳುವ ಅವಕಾಶ ಇದ್ದಾಗಲೂ ಶಿವಾಜಿ ಮಹಾರಾಜರು ಹಾಗೆ ಮಾಡಲಿಲ್ಲ. ಹಿಂದುವಿನ ರಕ್ತಕ್ಕೆ ತಕ್ಕಂತೆ ನಡೆದುಕೊಂಡರು. ಆ ಹೆಣ್ಣು ಮಗಳನ್ನು ಅತ್ಯಂತ ಗೌರವದಿಂದ ಸಂಭಾಳಿಸಿ ಮನೆಗೆ ಕಳಿಸಿಕೊಟ್ಟರು.
ಬುದ್ಧ ವೈದಿಕ ಪರಂಪರೆಯನ್ನು ಕೆಟ್ಟದಾಗಿ ಆಚರಿಸುವವರ ವಿರುದ್ಧ ಸಿಡಿದೆದ್ದ. ಪ್ರೇಮಮಾರ್ಗದಲ್ಲಿ ನಡೆದ. ಅವನ ಅನುಯಾಯಿಗಳು ಹಿಗ್ಗಿದರು. ವೈದಿಕ ಧರ್ಮದ ಅನುಯಾಯಿಗಳ ಸಂಖ್ಯೆ ಕಡಿಮೆಯಾಗುತ್ತ ನಡೆಯಿತು. ಆದರೆ ಎಲ್ಲಿಯೂ ಕೊಲೆಗಳು ನಡೆಯಲಿಲ್ಲ. ಮುಂದೆ ಶಂಕರರು ವೈದಿಕ ಆಚರಣೆಗಳನ್ನು ಮರುಸ್ಥಾಪಿಸುವಾಗ ಬುದ್ಧನ ಅನುಯಾಯಿಗಳೊಂದಿಗೆ ಚಚರ್ೆಗೆ ಕುಳಿತರು. ವಾದದಲ್ಲಿ ಸೋಲಿಸಿದರು. ತಮ್ಮ ಅನುಯಾಯಿಯಾಗಿಸಿಕೊಂಡರು. ಎಲ್ಲಿಯೂ ‘ವೇದ ವಿರೋಧಿ’ಯಾದವರನ್ನು ಕೊಂದ ಉಲ್ಲೇಖಗಳಿಲ್ಲ. ಇದು ಆನಂತರ ಧೂರ್ತ ಎಡಚರ ಕೈವಾಡದಿಂದ ತುರುಕಿದ ಇತಿಹಾಸವಾಯ್ತು ಅಷ್ಟೇ.
ದ್ವೈತ-ಅದ್ವೈತಗಳ ನಡುವೆ ಚಚರ್ೆಗಳು ಸಾಕಷ್ಟು ನಡೆದಿವೆ, ಕೇಳಲಾಗದ ಮಟ್ಟಕ್ಕೆ ಈಗಲೂ ನಡೆಯುತ್ತಿವೆ. ಹಾಗಂತ ಯಾರೂ ಒಬ್ಬರನ್ನೊಬ್ಬರು ಚಾಕುವಿನಿಂದ ಇರಿದು ಕೊಲ್ಲಲಿಲ್ಲ. ದಯಾನಂದರು ಇಸ್ಲಾಂ-ಕ್ರಿಶ್ಚಿಯಾನಿಟಿಗಳ ಮೇಲಷ್ಟೇ ಅಲ್ಲ ಹಿಂದೂಧರ್ಮದೊಳಗಿನ ಆಚರಣೆಗಳ ಮೇಲೂ ಗದಾಪ್ರಹಾರ ಮಾಡಿದರು. ಅವರನ್ನು ಹಿಂದೂಗಳು ಗೌರವದಿಂದಲೇ ಸ್ವೀಕರಿಸಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡರು. ಆದರೆ ಅವರನ್ನು ಕೊಲ್ಲಲು ಪ್ರಯತ್ನಪಟ್ಟಿದ್ದು ಒಬ್ಬ ಮುಸಲ್ಮಾನನೇ, ನೆನಪಿರಲಿ. ವಿವೇಕಾನಂದರು ಹಿಂದೂಗಳನ್ನು ಬೈದಿರುವುದನ್ನು ಕೇಳಿದರೆ ಗೊಂದಲಕ್ಕೆ ಬಿದ್ದು ಬಿಡುವಿರಿ. ಆದರೆ ಅವರ ಮಾತುಗಳನ್ನು ಇಂದಿಗೂ ತಿದ್ದಿಕೊಳ್ಳುವ ಪ್ರಯತ್ನ ಹಿಂದೂ ಸಮಾಜ ಮಾಡುತ್ತಲೇ ಇದೆ!
ಇಷ್ಟನ್ನೂ ಅದೇಕೆ ಹೇಳಬೇಕಾಯ್ತೆಂದರೆ ಇತ್ತೀಚೆಗೆ ಡಾ|| ಎಂ ಎಂ ಕಲಬುಗರ್ಿಯವರ ಹತ್ಯೆಯಾದೊಡನೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾಧ್ಯಮಗಳೆಲ್ಲ ಹಿಂದೂ ಕಠೋರವಾದಿಗಳು ಈ ಕೊಲೆಯ ಹಿಂದಿದ್ದಾರೆಂಬ ಏಕಪಕ್ಷೀಯ ನಿರ್ಣಯ ಕೈಗೊಂಡುಬಿಟ್ಟರು. ಕಲಬುಗರ್ಿಯವರು ಆಡಿದರೆನ್ನಲಾದ ನಾಲ್ಕಾರು ಮಾತುಗಳನ್ನು ಕೇಳಿ ಹಿಂದೂ ಅವರನ್ನು ಕೊಲ್ಲುವಷ್ಟು ರಕ್ತ ಹಾಳು ಮಾಡಿಕೊಂಡಿರಬಹುದೆಂದು ಯಾರೂ ನಂಬಲಾಗದ ಕಟ್ಟು ಕಥೆ. ಆಕ್ರೋಶದಿಂದ ಒಂದಿಬ್ಬರು ಫೇಸ್ಬುಕ್ನಲ್ಲಿ ಹಾಕಿಕೊಂಡ ಸ್ಟೇಟಸ್ಗಳಿಗೆ ಮೈಪರಚಿಕೊಂಡ ಪೊಲೀಸರು ಅವರನ್ನು ಬಂಧಿಸಿ ಇಡಿಯ ಘಟನೆಯನ್ನು ಅವರ ತಲೆಗೆ ಕಟ್ಟುವ ಪ್ರಯತ್ನ ಮಾಡಿದರು. ಛೀ! ಇದು ಅತ್ಯಂತ ನಾಚಿಗೇಡಿನ ಸಂಗತಿ. ಬಾಳಾಠಾಕ್ರೆಯವರು ತೀರಿಕೊಂಡಾಗ ಮುಂಬೈ ಹುಡುಗಿ ಹಾಕಿಕೊಂಡಿದ್ದ ಸ್ಟೇಟಸ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದ, ವಾಕ್ ಸ್ವಾತಂತ್ರ್ಯದ ಮಾತನಾಡಿದ್ದ ಎಡಪಂಥದ ಮಿತ್ರರೆಲ್ಲರೂ ಈಗೇಕೋ ಮುಗುಮ್ಮಾಗಿದರು.
ಹಾಗೆ ನೋಡಿದರೆ ವಾದಕ್ಕೆ ಬಗ್ಗದವರನ್ನು ಕೊಂದುಬಿಡುವ ಜಾಯಮಾನ ಈ ಧೂರ್ತ ಎಡಪಂಥೀಯರದೇ. ಕ್ರಿಶ್ಚಿಯನ್ನರು ಮುಸಲ್ಮಾನರದ್ದೇ. ಸುಮ್ಮನೆ ನಿಮ್ಮ ಮಾಹಿತಿಗಿರಲಿ ಅಂತ ಹೇಳೋದು. ಬಾಂಗ್ಲಾದಲ್ಲಿ ಅದಾಗಲೇ ನಾಲ್ಕು ಸ್ವತಂತ್ರ ಬ್ಲಾಗರ್ಗಳ ಕಗ್ಗೊಲೆಯಾಗಿಹೋಗಿದೆ. ಅವರೆಲ್ಲ ಮುಕ್ತವಾಗಿ ಇಸ್ಲಾಂನ ವಿರೋಧಿಸಿ ಬರಹಗಳನ್ನು ಬರೆದವರು. ಸಲ್ಮಾನ್ ರಶ್ದಿ, ತಸ್ಲೀಮಾ ಇಂದಿಗೂ ಭಯದ ನೆರಳಲ್ಲಿಯೇ ಕಾಲ ದೂಡುತ್ತಿದ್ದಾರೆ. ನಾಗಾಲಾಂಡಿನಲ್ಲಿ, ಮಿಜೋರಾಂಗಳಲ್ಲಿ ತಮಗಾಗದವರನ್ನು ಕೊಲ್ಲುವ ಪೃಥೆ ಕ್ರಿಶ್ಚಿಯನ್ ಮಿಶನರಿಗಳಿಗೆ ಇದ್ದೇ ಇದೆ. ಇನ್ನೂ ಬಂಗಾಳ ಮತ್ತು ಕೇರಳಗಳಲ್ಲಿ ಎಡಪಂಥೀಯರು ಅಕ್ಷರಶಃ ಗೂಂಡಾಗಳೇ. ಸಂಘದ ಅದೆಷ್ಟು ಕಾರ್ಯಕರ್ತರ ಹತ್ಯೆ ಮಾಡಿ ರಕ್ತದಲ್ಲಿ ಕೈ ತೊಳೆದು ಹೋಗಿದ್ದಾರೋ ಈ ಪಾಪಿಗಳು ದೇವರೇ ಬಲ್ಲ. ರಷ್ಯಾದ ದೊರೆಗಳಿಂದ, ಚೀನಾದ ಸವರ್ಾಧಿಕಾರಿಗಳಿಂದ ಪಾಠ ಕಲಿತವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಹೇಳಿ.
ಶಾಂತವಾಗಿರುವ ಕನರ್ಾಟಕದಲ್ಲಿ ಬಿರುಗಾಳಿಯೆಬ್ಬಿಸುವ ಪ್ರಯತ್ನ ಅವರು ಯಾವಾಗಲೂ ಮಾಡುತ್ತಲೇ ಇರುತ್ತಾರೆ. ಹಿಂದೂಗಳಿಗೆ ನೋವಾಗುವಂತಹ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಆಗೆಲ್ಲ ಪ್ರತಿಯೊಬ್ಬ ಹಿಂದೂ ಆಕ್ರೋಶಗೊಳ್ಳತ್ತಾನೆ. ಅದನ್ನು ಸಾತ್ವಿಕ ಶಕ್ತಿಯಾಗಿ ಪರಿವತರ್ಿಸಿಕೊಂಡು ಮುನ್ನಡೆಯುತ್ತಾನೆ. ಇಲ್ಲವಾದಲ್ಲಿ ಕೃಷ್ಣನನ್ನು ಕ್ರೂರಿ ಎಂದ ಭಗವಾನನು, ಕ್ರೈಸ್ತಧರ್ಮ ಜಗವನ್ನೂ ಆಕ್ರಮಿಸಲೆಂದ ದೇಜಗೌ ಹೀಗೆ ನೆಮ್ಮದಿಯಿಂದ ಇರಲು ಸಾಧ್ಯವೇ ಇರಲಿಲ್ಲ. ಕುವೆಂಪುರವರ ಶಿಷ್ಯರೆಂದುಕೊಳ್ಳುವ ದೇಜಗೌ, ಅವರ ಸಾಹಿತ್ಯಗಳಿಗೆ ಮನಸ್ಸನ್ನೂ ತೆರೆದುಕೊಂಡಿದ್ದರೆ ಚೆನ್ನಾಗಿತ್ತು. ಪ್ರಾದಿಯ ಮಗಳು ಕ್ರಿಸ್ತನತ್ತ ತರುಣರನ್ನು ಸೆಳೆಯಲು ಮಾಡುವ ಪ್ರಯತ್ನ ಗೊತ್ತಾಗುತ್ತಿತ್ತು. ಹೋಗಲಿ. ‘ಕ್ರೈಸ್ತ ಧರ್ಮ ಆಕ್ರಮಿಸಲಿ’ಎಂದರಲ್ಲ; ‘ಆಕ್ರಮಣ’ ಪದ ಪ್ರಯೋಗ ಸರಿಯೇ? ಎಂಬ ಪದಕ್ಕೆ ಅವರ ಬಳಿ ಉತ್ತರವಿರಲಿಕ್ಕಿಲ್ಲ. ಇಷ್ಟಾದರೂ ಹಿಂದೂ ಸುಮ್ಮನಿರುತ್ತಾನೆ. ಅವನಿಗೆ ಋಷಿಗಳ ಕಾಲದಿಂದಲೂ ಕಲಿಸಿಕೊಟ್ಟಿರುವ ಪಾಠ ಒಂದೇ. ‘ಸತ್ಯ ಶಾಶ್ವತವಾಗಿ ನಿಲ್ಲುತ್ತದೆ; ಸುಳ್ಳು ಕ್ಷಣಕಾಲ ಮೆರೆದು ಕಾಣೆಯಾಗಿಬಿಡುತ್ತದೆ’ ಅದಕ್ಕೇ ಸನಾತನ ಧರ್ಮ ಹತ್ತು ಸಾವಿರ ವರ್ಷಗಳ ನಂತರವೂ ಎದೆಯೆತ್ತಿ ನಿಂತಿರೋದು. ಸತ್ಯದ ತಾಕತ್ತು ಅದು!
ಹೀಗಾಗಿಯೇ ಎಸೆದ ಕಲ್ಲುಗಳು ನಮಗೆ ಭವ್ಯ ಅರಮನೆ ಕಟ್ಟುವಲ್ಲಿ ಅಡಿಪಾಯಕ್ಕೆ ಬಳಕೆಯಾಗುತ್ತವೆ. ಭಗವಾನ್ ಗೀತೆಯನ್ನು ಜರಿದ ಮೇಲೆ ಅನೇಕ ತರುಣರಿಗೆ ಗೀತೆಯಲ್ಲಿ ಆಸಕ್ತಿ ಹುಟ್ಟಿತು. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆತುರದಲ್ಲಿ ಹೊಸ ಪೀಳಿಗೆ ಹಿಂದೂ ಧರ್ಮದ ಅಪರೂಪದ ಲೋಕಕ್ಕೆ ತೆರೆದುಕೊಂಡಿತು. ಓಹ್! ಹೊಸಕೊಂಡಿಗೆ ಮೆತ್ತಿದ್ದ ಕಿಲುಬು ಸ್ವಚ್ಛವಾಯ್ತು. ಎಲ್ಲವೂ ಭಗವಾನನದ್ದೇ ಕೊಡುಗೆ. ಇಂತಹ ಭಗವಾನ್ ಅಕಸ್ಮಾತ್ ತೀರಿಕೊಂಡರೆ ಹಿಂದೂ ಸಮಾಜಕ್ಕೆ ಬಲು ದೊಡ್ಡ ನಷ್ಟ. ಏನಾದರು ಅವಘಡವಾದರಂತೂ ತುಂಬಲಾಗದ ನಷ್ಟ. ಹೀಗಿದ್ದ ಮೇಲೆ ಹಿಂದೂ ಕೊಲ್ಲುವ ಕೆಲಸ ಯಾಕಾದರೂ ಮಾಡಬೇಕು ಹೇಳಿ. ಭಗವಾನನ್ನು ಬಿಡಿ. ಕೆಲವರಂತೂ ಅದಾಗಲೇ ಕುಡಿದು, ಸಿಗರೇಟು ಸೇದಿ ತಾವೇ ಸಾಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಉರುಳಲಿರುವ ಒಣಕಲು ಮರವನ್ನು ಕಡಿದು ಸಾಧನೆಯ ಗರಿಯನ್ನು ಕಿರೀಟಕ್ಕೇರಿಸಿಕೊಳ್ಳುವ ದದರ್ು ಹಿಂದೂ ಮಿತ್ರರಿಗಂತೂ ಇಲ್ಲ.
ಇವೆಲ್ಲ ಮತ್ತೆ ಎಡಚ ಬುದ್ಧಿ ಜೀವಿಗಳಿಗೇ ಅಂಟಿಕೊಂಡಿರುವ ರೋಗ. ಫೇಸ್ಬುಕ್ಕಿನಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ.
ಇರಲಿ, ಇರಲಿ. ಎದುರಿಸೋಣ. ಅಲೆಕ್ಸಾಂಡರಿನಿಂದ ಹಿಡಿದು ಮುಷರ್ರಫ್ನವರೆಗೆ ಬಾಹ್ಯ ಆಕ್ರಮಣಗಳನ್ನೆದುರಿಸಿದ್ದೇವೆ. ಚಾವರ್ಾಕನಿಂದ ಶುರು ಮಾಡಿ ಓಶೋವರೆಗಿನ ಆಂತರಿಕ ಆಘಾತಗಳಿಗೂ ಗುರಾಣಿಯಾಗಿದ್ದೇವೆ. ಇನ್ನು ಇವೆಲ್ಲ ಯಾವ ಲೆಕ್ಕ?
ಛೇ! ಹೇಳಬೇಕಾದ್ದನ್ನೇ ಮರೆತೆ. ಡಾ|| ಕಲಬುಗರ್ಿಯವರು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಹಂಪಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವರ ಕೊಡುಗೆಯೂ ಬಲು ದೊಡ್ಡದು. ಆದರೆ ಅವರಿರುವ ಸ್ಥಾನದ ದೃಷ್ಟಿಯಿಂದ ಒಂದಷ್ಟು ಆಡಬಾರದ ಮಾತುಗಳನ್ನು ಅವರು ಆಡಿ ಅನೇಕರ ಮನ ನೋಯಿಸಿದರು. ಹಾಗಂತ ಅದು ಕೊಲೆ ಮಾಡುವಂತಹ ಆಪಾದನೆಯಲ್ಲ. ಹಿಂದೂ ಸಮಾಜ ಹಾಗೆ ಮಾಡುವುದೂ ಇಲ್ಲ; ಮಾಡಿದವರನ್ನು ಅನುಮೋದಿಸುವುದೂ ಇಲ್ಲ. ಇವೆಲ್ಲ ಆಳುವ ಸಕರ್ಾರದ ಧೂರ್ತ ಕಾಣ್ಕೆಗಳು ಅಷ್ಟೇ. ಇಲ್ಲವಾದಲ್ಲಿ ಫೇಸ್ಬುಕ್ ಪೋಸ್ಟ್ಗಳನ್ನು ಅನುಸರಿಸಿ ಹಿಂದೂ ಸಂಘಟನೆಗಳನ್ನು ಕೊಲೆಗಡುಕರೆಂದು ಬಿಂಬಿಸುವಷ್ಟು ದೈನೀಯ ಸ್ಥಿತಿಗೆ ತನಿಖೆ ಬರಬಾರದಿತ್ತು.
ಒಂದಂತೂ ನೆನಪಿಡಿ. ನೈಜ ಹಿಂದೂ ತನ್ನನ್ನು ವಿರೋಧಿಸುವವನನ್ನು ಕೊಲ್ಲುವುದಿರಲಿ, ಹೊಡೆಯಲಾರ ಕೂಡ. ಇಷ್ಟಾದ ಮೇಲೂ ಹಿಂದೂ ಸಂಘಟನೆಯೇ ಇದನ್ನ ಮಾಡಿದೆ ಎಂದು ತನಿಖೆಗಳು ನಿರ್ಧರಿಸುವುದಾದರೇ ಒಂದೇ ತನಿಖೆ ದಿಕ್ಕು ತಪ್ಪಿದೆ ಅಥವಾ ಆ ಸಂಘಟನೆ ಹಾದಿ ಬಿಟ್ಟಿದೆ ಅಂತರ್ಥ. ನಿಸ್ಸಂಶಯವಾಗಿ!!

ಅವರಿಬ್ಬರಿದ್ದರು- ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.
ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.
ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.
ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…
ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!
ಹಾಗೇ ನೋಡುತ್ತ ನಿಂತವನಿಗೆ ಮುದುಇಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಲ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.
ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.
ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.
ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಮ್ತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!
ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಲೀತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!
ಆಮೆಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!
ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.
ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.
ಸರಿ. ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”
ಕೆಂಪು ಜುಟ್ಟಿನ ಹುಂಜದ ಮಾತು ಕೇಳಿ ಜನರು ಆಶ್ಚರ್ಯ ಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.
ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜ ಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃ ಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.
ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.
ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.
ಈಗಂತು ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.
ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!
ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!
“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”
ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿ ಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.
ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.
ಆಮೇಲಿಂದ ಅಣ್ನ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.
ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

ಅವರಿಬ್ಬರಿದ್ದರು- ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.
ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…
ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!ಹಾಗೇ ನೋಡುತ್ತ ನಿಂತವನಿಗೆ ಮುದುಇಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಲ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.
ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಮ್ತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!
ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಲೀತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!ಆಮೆಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!
ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.
ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.ಸರಿ. ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”
ಕೆಂಪು ಜುಟ್ಟಿನ ಹುಂಜದ ಮಾತು ಕೇಳಿ ಜನರು ಆಶ್ಚರ್ಯ ಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜ ಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃ ಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.
ಈಗಂತು ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!
“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿ ಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.
ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.ಆಮೇಲಿಂದ ಅಣ್ನ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ.

ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು.
ನಾನು ಈ ಎರಡನೆ ಸಾಲಿಗೆ ಸೇರಿದ್ದು. ಹಾಗೆ, ಈ ಕಾವ್ಯಗಳ ಪಾತ್ರಗಳಿಗೆ ನನ್ನದೇ ಆದ ಬೇರೆಯೇ ಬಗೆಯ ಚಿಂತನೆಯನ್ನ ಆರೋಪಿಸಿ ಬರೆಯುವುದು ನನ್ನ ಹವ್ಯಾಸವಾದರೂ ಅಂತರಂಗದಲ್ಲಿ ’ನಿಜ’ವಾದ ಸತ್ತ್ವ ಏನು ಎಂಬ ಕುತೂಹಲ ನನ್ನದಿತ್ತು. ಈ ನಿಟ್ಟಿನಲ್ಲಿ ರಾಮಾಯಣದ ಮೂರು ಮುಖ್ಯ ಪ್ರಶ್ನೆಗಳಾದ “ರಾಮ ವಾಲಿಯನ್ನ ಮರೆಯಲ್ಲೇಕೆ ಕೊಂದ?”, ಸೀತಾ ಪರಿತ್ಯಾಗ ಸಮುಚಿತವೇ” ಮತ್ತು ಸಂಬೂಕ ವಧೆ ಎಷ್ಟು ಸರಿ?”- ಇವುಗಳ ಬೆನ್ನು ಹತ್ತಿ ಹೊರಟಿದ್ದೆ. ಕೊನೆಗೆ ಸಮಾಧಾನಕರ ಅಂಶ ಸಿಕ್ಕಿದ್ದು, ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥಗಳಲ್ಲಿ! ಅದನ್ನ ನೇರಾನೇರ ಓದಿಲ್ಲ ನಾನು. ಅದನ್ನೆಲ್ಲ ಕ್ರೋಢೀಕರಿಸಿ ಮಾಧ್ವ ಮಹಾ ಮಂಡಲದವರು ಮಾಡಿದ ಹೊತ್ತಗಿಯಲ್ಲಿ, ಶ್ರೀ ವಿಶ್ವೇಶ ತೀರ್ಥರ ಪ್ರಸ್ತಾವನೆಯಲ್ಲಿ ಸಿಕ್ಕಿದ್ದು!
ಅಲ್ಲಿ ನೀಡಿರುವ ಉತ್ತರಗಳನ್ನ ( ಶ್ರೀ ವಿಶ್ವೇಶ ತೀರ್ಥರು ಬರೆದಿರುವಂತೆ) ಇಲ್ಲಿ ಯಥಾವತ್ ನಿರೂಪಿಸಲಾಗಿದೆ.

ಶ್ರೀ ರಾಮ ವಾಲಿಯನ್ನು ನೆರವಾಗಿ ನಿಂತು ಬಾಣ ಪ್ರಯೋಗಿಸದೇ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿಯೇ?

ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನು ವಾಲಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದರ ಕಾರಣಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾವಣ ಹೆಗೆ ಸೀತಾದೇವಿಯನ್ನು ಅಪಹರಿಸಿದ್ದನೋ ಹಾಗೆಯೇ ವಾಲಿ ಕೂಡ ಸುಗ್ರೀವನ ಹೆಂಡತಿಯ ಮೇಲೆ ಬಲಾತ್ಕಾರವೆಸಗಿ ತನ್ನ ವಶ ಮಾಡಿಕೊಂಡ. ಈ ನಿಟ್ಟಿನಲ್ಲಿ ವಾಲಿ ಕೂಡ ರಾವಣನ ಸಮಾನ ಅಪರಾಧಿ. ಇಂಥಹ ದುರ್ವರ್ತನೆ ತೋರಿದವನನ್ನು ನಿಗ್ರಹಿಸುವುದರಲ್ಲಿ ತಪ್ಪೇನಿದೆ? ಶಕ್ತಿ ಪರೀಕ್ಷೆಗಾಗಿ ನಡೆಸುವ ಯುದ್ಧಗಳಲ್ಲಿ ಕ್ರಿಕೆಟ್ ಮುಂತಾದ ಆಟಗಳಾ ನಿಯಮದಂತೆ ಯುದ್ಧ ನಿಯಮವನ್ನೂ ಚಾಚೂ ತಪ್ಪದೆ ಅನುಸರಿಸಬೇಕು. ಆದರೆ ದುಷ್ಟರನ್ನು, ಅಧಾರ್ಮಿಕರನ್ನು ಶಿಕ್ಷಿಸುವಾಗ ಈ ನಿಯಮಗಳನ್ನು ಅನುಸರಿಸುವ ಅವಶ್ಯಕತೆಯಿಲ್ಲ. ಕಳ್ಳರು, ದರೋಡೆಕಾರರು ಮತ್ತು ಭಯೋತ್ಪಾದಕರನ್ನು ಹಿಡಿಯಲು ಯಾವುದೇ ತಂತ್ರಗಳನ್ನು ಅನುಸರಿಸಿದರೂ ತಪ್ಪೆನ್ನಿಸುವುದಿಲ್ಲವಶ್ಟೆ? ಆದುದರಿಂದ ಅತ್ಯಾಚಾರಿಯಾದ ವಾಲಿಯನ್ನು ರಾಮನು ಮರೆಯಲ್ಲಿ ನಿಂತು ಕೊಂದುದರಲ್ಲಿ ಯಾವುದೇ ನೈತಿಕ ಅಪರಾಧವಿಲ್ಲ. ಈ ಸಮರ್ಥನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ನೋದಬಹುದು.
ಇದೇ ವಾಲ್ಮೀಕಿ ರಾಮಾಯಣದಲ್ಲಿ ಮತ್ತೂ ಒಂದು ವಿಶಯವನ್ನು ಗಮನಿಸಬೇಕು. ಅದು, ಧರಾಶಾಯಿಯಾದ ವಾಲಿ ಮತ್ತು ಶ್ರೀರಾಮರ ಚರ್ಚೆ. ರಾಮನೊಂದಿಗೆ ಚರ್ಚಿಸಿದ ವಾಲಿಗೆ ತನ್ನ ತಪ್ಪಿನ ಅರಿವಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ರಾಮನು ಆತನಿಗೆ ಜೀವದಾನ ನೀಡಿ ಬದುಕಿಸಬಲ್ಲೆ ಎಂದು ಆಹ್ವಾನವಿತ್ತಾಗ, ವಾಲಿ ಅದನ್ನು ನಿರಾಕರಿಸಿ ರಾಮ ಸನ್ನಿಧಿಯಲ್ಲಿ ದಿವ್ಯ ಮರಣವನ್ನು ಅಪೇಕ್ಷಿಸುತ್ತಾ ಶಾಂತನಾಗಿಯೇ ಸಾವನ್ನು ಸ್ವೀಕರಿಸುತ್ತಾನೆ.

ನನಗನ್ನಿಸಿದ್ದು: ನಮಗೆ ರಾಮಾಯಣ ಗೊತ್ತಿರುವುದು ವಾಲ್ಮೀಕಿ ರಾಮಾಯಣದ ಮೂಲಕವೇ. ಆನಂತರದಲ್ಲಿ ಅನೇಕಾನೇಕ ಪ್ರಕ್ಷೇಪಗಳು ಬಂದು ಮೂಲ ರಾಮಾಯಣ ಯಾವುದೆಂದೇ ತಿಳಿಯದಾಗುವ ಪರಿಸ್ಥಿತಿ ಬಂದಿದೆ. ನಾವು ಬೇಕಿದರೆ ನಮ್ಮ ನಮ್ಮ ಚಿಂತನೆಯ ಮೂಲಕ ವಾಲ್ಮೀಕಿ ರಾಮಾಯಣದಿಂದ ಮೂಲ ಪಾತ್ರ ಸನ್ನಿವೇಶಗಳನ್ನು ತೆಗೆದುಕೊಂಡು ಹೊಸತನ್ನು ಹೆಣೆಯೋಣ. ಆದರೆ ಅವಕ್ಕೆ ನಾವು ‘ಇತಿಹಾಸ’ದ ಹಣೆಪಟ್ಟಿ ಕೊದಲಾಅಗ್ದು. ಅದು ಮೂರ್ಖತನ ಕೂಡ. ರಾಮನ ಬಗ್ಗೆ, ರಾಮಾಯಣದ ಬಗ್ಗೆ ಮಾತಾಡುವಾಗ ವಾಲ್ಮೀಕಿ ರಾಮಾಯಣವೊಂದೇ ಮೂಲ, ಪ್ರಮಾಣ. ಹೀಗಾಗಿ ರಾಮ ವಾಲಿಯನ್ನು ಕೊಂದ ಎಂದು ರಾಮಾಯಣದ ಆಧಾರದ ಮೇಲೆ ಹೇಳುವ ನಾವು, ಯಾಕೆ ಹಾಗೆ ಮಾಡಿದ ಎನ್ನುವುದಕ್ಕೂ ಅಲ್ಲಿಯೇ ಉತ್ತರವನ್ನು ಹುಡುಕಬೇಕಲ್ಲವೆ?

ಸೀತಾ ಪರಿತ್ಯಾಗದ ಪ್ರಶ್ನೆ, ಮುಂದಿನ ಕಂತಿನಲ್ಲಿ…

ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…

ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ  ತಪೋಸಂಚಯ ನಷ್ಟವಾಯಿತು. ಇಂಥ ದಿವ್ಯ ವೀರ್ಯದಿಂದ ಅತ್ಯದ್ಭುತ ಲಾವಣ್ಯದ ಹೆಣ್ಣು ಶಿಶು ಜನಿಸಿತು. ಎಂದಿನಂತೆ ಅಪ್ಸರೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಇತ್ತ ಕಂಡು ಮುನಿ, ತನ್ನ ಶಕ್ತಿಯನ್ನು ಪುನಃ ಸಂಪಾದಿಸಲು ತಪಸ್ಸಿಗೆ ಕುಂತುಬಿಟ್ಟ.

ತಂದೆ ತಾಯಿಯರ ಉಪೇಕ್ಷೆಗೆ ಒಳಗಾದ ಮಗು ಕಾಡಿನಲ್ಲಿ ಒಂಟಿಯಾಗಿ ಹಸಿವು, ಚಳಿ ಗಾಳಿಯಿಂದ ತತ್ತರಿಸಿ ಒಂದೇಸಮನೆ ಅಳತೊಡಗಿತು. ಈ ಮಗುವನ್ನು ಕಂಡ ಚಂದ್ರದೇವ ತನ್ನ ಅಮೃತ ಕಿರಣಗಳನ್ನು ಊಡಿ ಮಗುವನ್ನು ಸಾಂತ್ವನಗೊಳಿಸಿದ. ತನ್ನ ಆಜ್ಞಾಪಾಲಕರಾದ ವೃಕ್ಷದೇವತೆಗಳಿಗೆ ಮಗುವಿನ ಪೋಷಣೆಯ ಜವಾಬ್ದಾರಿ ಕೊಟ್ಟ. ಹೀಗೆ ಕಂಡು- ಪ್ರಮ್ಲೋಚೆಯರ ಮಗಳಾದ ‘ಮಾರಿಷೆ’ಯು ವನದೇವಿಯ ಮಡಿಲಲ್ಲಿ ಬೆಳೆಯತೊಡಗಿದಳು.

ಪ್ರಾಚೀನ ಬರ್ಹಿ ಎಂಬೊಬ್ಬ ರಾಜನದು ಬೇರೆಯೇ ಕಥೆ. ಅದಿನ್ನೂ ದೊಡ್ಡ ಕಥೆ. ಅವನ ಹತ್ತು ಮಕ್ಕಳ ಹೆಸರೂ ’ಪ್ರಚೇತ’ರೆಂದೇ. ಆ ಮಕ್ಕಳು ಕೂಡ ತಪೋಸಂಪನ್ನರು. ಬ್ರಹ್ಮನ ಆದೇಶದ ಮೇರೆಗೆ ಆ ಹತ್ತೂ ಸಹೋದರರು  ಮಾರಿಷೆಯನ್ನು ಮದುವೆಯಾದರು!

ಮುಂದೆ ಮಾರಿಷೆಯ ಗರ್ಭದಲ್ಲಿ ಪ್ರಚೇತರು ’ದಕ್ಷ’ನನ್ನು ಪಡೆದರು.  ದಕ್ಷ, ಭೂಲೋಕದಲ್ಲಿ ಮಾನವ ಸಂತಾನವನ್ನು ವ್ಯಾಪಕಗೊಳಿಸಿ, ’ಪ್ರಜಾಪತಿ’ ಅನಿಸಿಕೊಂಡನು.

ಈತ ಹಿಂದೆ ದಾಕ್ಷಾಯಣಿಯ ತಂದೆಯಾಗಿ, ಅವಳ ಆತ್ಮಾಹುತಿಗೆ ಕಾರಣನಾಗಿ ಶಿವನಿಂದ ದಂಡನೆಗೊಳಗಾಗಿದ್ದನಲ್ಲ, ಅದೇ ದಕ್ಷ. ಶಿವ ಶಾಪದಿಂದ ಮತ್ತೆ ಭೂಮಿಯಲ್ಲಿ ಹುಟ್ಟಿಬಂದ. ಶಪಿತನಾದರೂ ಆತ ಬ್ರಹ್ಮನ ಮಗನಲ್ಲವೇ? ಭೂಮಿಯಲ್ಲಿ ಹುಟ್ಟಲು ಆತನಿಗೆ ಸತ್ತ್ವಯುತ ಕ್ಷೇತ್ರವೇ ಆಗಬೇಕಿತ್ತು. ಅದಕ್ಕೆಂದೇ ಕಂಡು-ಪ್ರಮ್ಲೋಚೆಯರ ಪ್ರಹಸನವನ್ನು ನಿಯತಿ ಏರ್ಪಡಿಸಿದ್ದಳು!

ಮುಂದೆ ಹತ್ತು ಮಂದಿ ಪ್ರಚೇತರು ಮಾರಿಷೆಯಲ್ಲಿ ವೀರ್ಯ ಪ್ರತಿಷ್ಟಾಪಿಸಿ ದಕ್ಷನನ್ನು ಪಡೆದರು.

ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ.

ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.

ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ ಜೊತೆಯಲ್ಲಿ ನಭಗನನ್ನು ಕಳುಹಿಸಿಕೊಟ್ಟರು.

ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಮಕ್ಕಳ ಬಗ್ಗೆ ನಭಾಗನಿಗೆ ಬೇಸರವಾಯಿತು. ಅವನ ಮೇಲಿನ ಕರುಣೆಯಿಂದ ಎರಡು ವಿಶೇಷ ಮಂತ್ರಗಳನ್ನು ಅವನಿಗೆ ನೀಡಿ, “ಅಂಗೀರನ ವಂಶಸ್ಥರು ಈಗೊಂದು ಮಹಾ ಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು. ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ತುಷ್ಟರಾಗುವ ಅವರು ಯಜ್ಞದ ನಂತರ ಉಳೀಯುವ ಸಂಪತ್ತನ್ನು ನಿನಗೆ ನೀಡುವರು” ಎಂದು ಸೂಚಿಸಿದನು.

ಅದರಂತೆ ನಾಭಾಗನು ಯಜ್ಞ ಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಟಿಸಿದನು. ಅಂಗೀರ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ ಈ ಯಜ್ಞ ಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು” ಎಂದು ತಡೆದನು.

ಕೊನೆಗೆ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ನಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ಆತನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು. ಅದರಂತೆ, ಆ ಎಲ್ಲವನ್ನು ಆತನಿಗೇ ಅರ್ಪಿಸುವಂತೆ ಮಗನಿಗೆ ಹೇಳಿದನು. ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನು ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು.

ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಅದನ್ನು ಆತನಿಗೇ ಮರಳಿಸಿ, ಜೊತೆಗೆ ದಿವ್ಯ ಜ್ಞಾನವನ್ನೂ ಕರುಣಿಸಿ ಅಂತರ್ಧಾನನಾದನು.

– ಈ ಕಥೆ, ಭಾಗವತದ ೯ನೇ ಸ್ಕಂಧ, ೪ನೇ ಅಧ್ಯಾಯದಲ್ಲಿ ಬರುತ್ತದೆ. ಸಾತ್ತ್ವಿಕ ಮನಸ್ಸು, ಹಿರಿಯರ ಮಾತಿನಲ್ಲಿ ಗೌರವವಿರುವ ಯಾವ ವ್ಯಕ್ತಿಯೇ ಆದರೂ ವಿಶೇಷ ಕೃಪೆಗೆ ಪಾತ್ರನಾಗುತ್ತಾನೆ ಎನ್ನುವುದು ಈ ಕಥೆಯ ತಿರುಳು.

ಕ್ಯೋಟೋ ರಾಜ್ಯಪಾಲನೊಬ್ಬನಿಗೆ ಒಮ್ಮೆ ಝೆನ್ ಮಹಾಗುರು ಕೆಯಿಚುವನ್ನು ಭೇಟಿ ಮಾಡುವ ಮನಸ್ಸಾಯಿತು. ತೊಫುಕು ದೇವಾಲಯದಲ್ಲಿ ಉಪದೇಶ ಮಾಡುತ್ತಿದ್ದ ಕೆಯಿಚುವಿಗೆ ಆತ ಹೊರಗಿನಿಂದ ತನ್ನ ಗುರುತಿನ ಚೀಟಿ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು; ಕಿಟಾಗಕಿ, ಕ್ಯೋಟೋ ರಾಜ್ಯಪಾಲ.
ಅದನ್ನೋದಿದ ಕೆಯಿಚು, “ಇವರೊಂದಿಗೆ ನನಗೇನು ಕೆಲಸ? ನಾನು ಇವರನ್ನ ಭೇಟಿಯಾಗೋದಿಲ್ಲ” ಎಂದು ಚೀಟಿಯನ್ನು ವಾಪಸು ಕಳಿಸಿಬಿಟ್ಟ.
ಸೇವಕ ತಲೆ ತಗ್ಗಿಸಿ ನಿಂತು ರಾಜ್ಯಪಾಲನಿಗೆ ವರದಿ ಒಪ್ಪಿಸಿದ. ಈಗ ಆತ ಚೀಟಿ ತೆಗೆದುಕೊಂಡು ’ಕ್ಯೋಟೋ ರಾಜ್ಯಪಾಲ’ ಎನ್ನುವ ಪದಗಳಿಗೆ ಕಾಟೂ ಹಾಕಿ ಮತ್ತೆ ಕಳಿಸಿಕೊಟ್ಟ.
ಸೇವಕ ನೀಡಿದ ಚೀಟಿಯನ್ನು ನೋಡಿದ ಮಹಾಗುರು, “ಓ, ನಾನು ಕಿಟಾಗಕಿಯೊಂದಿಗೆ ಮಾತನಾಡೋದಿದೆ. ಅವರನ್ನ ಬರಹೇಳು” ಅಂದ!

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡದ್ರು. ಸಿಂಗ ತನ್ ಯಜಮಾನನ್ನ ಒಂದ್ ಕಥೆ ಹೇಳು, ಒಂದ್ ಕಥೆ ಹೇಳು ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. ಸಿಂಗನ ಹಟಕ್ಕೆ ಜಗ್ಗದೆ ಅಂವ ಹಾಗೇ ನಿದ್ದೆ ಹೋದ.

ಹೀಗೆ ಅಗಸ ಗಾಢ ನಿದ್ದೆಯಲ್ಲಿದ್ದಾಗ ಅವನ ಹೊಟ್ಟೇಲಿದ್ದ ನಾಲ್ಕು ಕಥೆಗಳು ಎದ್ದು ಬಂದು ಅವನ ಮೈಮೇಲೆ ಕೂತ್ಕೊಂಡ್ವು. ಕೂತು ಮಾತಾಡ್ಲಿಕ್ ಶುರು ಮಾಡಿದ್ವು. ಅವಕ್ಕೆ ತುಂಬ ಕೋಪ ಬಂದಿತ್ತು. “ ಅಲ್ಲ, ಚಿಕ್ಕಂದಿಂದ್ಲು ಈ ಅಗಸಂಗೆ ನಮ್ ವಿಷಯ ಚೆನ್ನಾಗ್ ಗೊತ್ತಿದೆ. ಆದ್ರೂ ಯಾರಿಗೂ ಇವ್ನು ನಮ್ ಬಗ್ಗೆ ಹೇಳೋಲ್ವಲ್ಲ ಯಾಕೆ? ಮತ್ಯಾಕೆ ನಾವು ಅವ್ನ ಹೊಟ್ಟೇಲಿರ್ಬೇಕು? ನಾವು ಅವನನ್ನ ಕೊಂದು ಬೇರೆಲ್ಲಿಗಾದ್ರೂ ಹೊರಟ್ ಹೋಗೋಣ” ಅಂತ ಮಾತಾಡ್ಕೊಂಡ್ವು. ಅವರ ಮಾತು ಸಿಂಗನಿಗೆ ಕೇಳಿಸ್ಬಿಡ್ತು. ಮುಂದೇನು ಮಾತಾಡ್ತಾರೋ ಅಂತ ನಿದ್ದೆ ನಟಿಸ್ತ ಅವುಗಳ ಮಾತನ್ನ ಕಿವಿಕೊಟ್ಟು ಕೇಳಿಸ್ಕೊಂಡ. ಮೊದಲ ಕಥೆ ಹೇಳ್ತು. “ಈ ಅಗಸ ಬೆಳಗ್ಗೆ ಎದ್ದು ಬುತ್ತಿ ಬಿಚ್ಚಿ ತಿನ್ನೋಕೆ ಕೂರ್ತಾನಲ್ಲ, ಆಗ ನಾನು ಮುಳ್ಳಾಗಿ ತುತ್ತಿನೊಳಗೆ ಸೇರ್ಕೊಂಡು ಅವನ ಗಂಟಲಿಗೆ ಚುಚ್ಚಿ ಕೊಲ್ತೇನೆ”. “ಒಂದು ವೇಳೆ ಅಂವ ಸಾಯದಿದ್ರೆ ನಾನು ಇದೇ ಮರದೊಳಗೆ ಸೇರ್ಕೊಂಡು ಅವನ ಮೇಲೆ ಬಿದ್ದು ಸಾಯಿಸ್ತೇನೆ” ಅಂತು ಎರಡನೆ ಕಥೆ. ಮೂರನೆಯದು, “ನಿಮ್ಮಿಬ್ಬರ ಕೈಲಿ ಆಗದಿದ್ರೆ ನಾನು ಇಲ್ಲೇ ಹತ್ತಿರ ಇರೋ ಆ ಹುತ್ತದಲ್ಲಿ ಹಾವಾಗಿ ಕಾದು ಕೂತು ಅವನನ್ನ ಕಚ್ತೀನೆ” ಅಂತು. ಕೊನೆಗೆ ನಾಲ್ಕನೇ ಕಥೆ, ಈ ಯಾವುದ್ರಿಂದ್ಲೂ ಅಂವ ಸಾಯ್ದೆ ಹೋದ್ರೆ, ಅಂವ ಹೊಳೆ ದಾಟ್ತಾನಲ್ಲ, ಆಗ ದೊಡ್ಡ ತೆರೆಯಾಗಿ ಬಂದು ಅವನನ್ನ ಕೊಚ್ಕೊಂಡು ಹೋಗ್ತೀನಿ” ಅಂತ ಹೇಳ್ತು.
ಅವುಗಳಲ್ಲಿ ಒಂದು ಕಥೆಗೆ ತಮ್ಮ ಮಾತನ್ನ ಯಾರಾದ್ರೂ ಕೇಳಿಸ್ಕೊಂಡ್ರೆ ಅನ್ನೋ ಅನುಮಾನ ಬಂತು. ನಾಲ್ಕೂ ಕಥೆಗಳು ಸೇರಿ, ಯಾರಾದ್ರೂ ಅಗಸನಿಗೆ ತಮ್ಮ ಮಾತುಗಳ್ನ ತಿಳಿಸಿದ್ರೆ ಅವ್ರು ಕಲ್ಲಾಗ್ತಾರೆ ಅಂತ ಶಾಪ ಕೊಟ್ವು.

ಬೆಳ್ಗಾಯ್ತು. ಹತ್ರ ಇದ್ದ ನದೀಲಿ ಮುಖ ತೊಳ್ಕೊಂಡ್ ಬಂದ ಅಗಸ ಬುತ್ತಿ ಬಿಚ್ಚಿ ತಿನ್ನೋಕೆ ಕೂತ. ಆಗ ಸಿಂಗ ಓಡಿ ಬಂದವ್ನೇ ತನ್ನ ಮೂತಿಯಿಂದ ಅನ್ನದ ಬಟ್ಟಲನ್ನ ತಳ್ಳಿ ಚೆಲ್ಲಿಬಿಟ್ಟ. ಸಿಟ್ಟಿಗೆದ್ದ ಅಗಸ ಇನ್ನೇನು ಹೊಡೀಬೇಕು ಅನ್ನುವಾಗ ಅವಂಗೆ ಚೆಲ್ಲಿದ ಅನ್ನದಲ್ಲಿ ಮುಳ್ಳುಗಳಿರೋದು ಕಾಣಿಸ್ತು.
ಈ ಸಂಗತಿಯಿಂದ ತಲೆಕೆಟ್ಟ ಅಗಸ ಇನ್ನೇನು ಸುಧಾರಿಸ್ಕೊಳ್ಬೇಕು ಅನ್ನುವಾಗ ಇದ್ದಕ್ಕಿದ್ದಹಾಗೇ ಓಡಿಬಂದ ಸಿಂಗ ತನ್ನ ಯಜಮಾನನ ಪಂಚೆ ಹಿಡಿದು ಎಳೆದು ಎಳೆದೂ ಎಲ್ಲಿಗೋ ಕರೆಯತೊಡಗಿದ. ಅಗಸನೂ ಸಿಟ್ಟಿಗೆದ್ದು ಹೊರಟ. ಇನ್ನೇನು ಅಂವ ಮರದ ಬುಡದಿಂದ ಎದ್ದಿರಬೇಕು, ಧೊಪ್ಪೆಂದು ಬಿದ್ದ ಸದ್ದು!
ಸರಿ. ಅಗಸ ಇನ್ನು ಅಲ್ಲಿಂದ ಹೊರಡೋದೇ ವಾಸಿ ಅಂದುಕೊಂಡ. ತನ್ನ ಬಟ್ಟೆಗಂಟು ಸರಿಂಆಡಿಕೊಳ್ಳತೊಡಗಿದ. ಅಲ್ಲೇ ಹತ್ತಿರವಿದ್ದ ಹುತ್ತದಿಂದ ಹಾವು ಹೊರಬಂತು. ಅದನ್ನೇ ಕಾಯ್ತಿದ್ದ ಸಿಂಗ, ತನ್ನ ಗೊರಸಿಂದ ಅದನ್ನ ತುಳಿತುಳಿದು ಕೊಂದು ಹಾಕಿದ.
ಅಗಸ ’ಭಲಾ’ ಅಂತ ಬೆನ್ನು ನೇವರಿಸಿ ಹೊಳೆಯತ್ತ ಹೊರಟ. ಅಲ್ಲೂ ಭಾರೀ ತೆರೆ ಬರೋದನ್ನ ನೋಡಿದ ಸಿಂಗ, ಯಜಮಾನನ್ನ ಬೆನ್ನ ಮೇಲೆ ಕೂರಿಸ್ಕೊಂಡು ಆಚೆ ದಡಕ್ಕೆ ಕರೆದೊಯ್ದ.

ಅಷ್ಟೂ ಹೊತ್ತು ಸುಮ್ಮನಿದ್ದ ಅಗಸ ಸಮಾಧಾನವಾದ ಮೇಲೆ ಸಿಂಗನ್ನ ಕೇಳ್ದ.“ ಪ್ರತಿ ಸಾರ್ತಿ ನೀನು ನನ್ ಜೀವ ಉಳಿಸ್ತಲೇ ಬಂದಿದೀಯ. ನಿಂಗೆ ನನ್ ವಿಷ್ಯ ಏನೋ ಗೊತ್ತಾಗಿದ್ದೆ. ಏನದು ಹೇಳು?”
ಊಹೂಂ… ಸಿಂಗ ಬಾಯಿ ಬಿಗಿದ್ಕೊಂಡು ನಿಂತುಬಿಟ್ಟ. ಅಗಸ ಪೀಡಿಸಿ ಪೀಡಿಸಿ ಕೇಳಿದಾಗ, ‘ಅದನ್ನ ಹೇಳಿದ್ರೆ ನಾನು ಕಲ್ಲಾಗಿಹೋಗ್ತೀನಿ’ ಅಂದ. ಆದ್ರೂ ಅಂವ ಬಿಡಲಿಲ್ಲ. ಹೇಳಲೇಬೇಕು ಅಂತ ಹಟ ಹಿಡಿದ. ಕೊನೆಗೆ ಸಿಂಗ ಕಥೆಗಳ ಮಾತನ್ನ ಹೇಳಿದ. ಹೇಳಿ ಮುಗೀತಲೇ ನಿಂತಲ್ಲಿ ಕಲ್ಲಾಗಿಹೋದ!

ನಾಲ್ಕು ನಾಲ್ಕು ಸಾರ್ತಿ ಜೀವ ಉಳಿಸಿದ ತನ್ನ ಪ್ರೀತಿಯ ಭಂಟ ಹಾಗೆ ನಿಜವಾಗಿಯೂ ಕಲ್ಲಾಗಿದ್ದು ನೋಡಿ ಕಣ್ಣೀರು ಸುರಿಸಿದ ಅಗಸ, ಆ ಕಲ್ಲಿನ ಮೇಲೆ ಬಟ್ಟೆ ಒಗೆಯೋದನ್ನ ರೂಢಿಸ್ಕೊಂಡ. ಹೀಗೆ ಸದಾ ತನ್ನ ಸಂಗಾತಿ ಜೊತೆ ಇರುವ ಸಮಾಧಾನ ಅವನದಾಗ್ತಿತ್ತು. ಮುಂದೆ ಊರಿನ ಜನ, ಹೊಳೆ ಹತ್ತಿರದ ಆ ಕಲ್ಲನ್ನ ‘ಅಗಸನ ಕಲ್ಲು’ ಅಂತ್ಲೇ ಕರೆದರು.

ಹೆಲೋ!

ನಾವು ಇವತ್ತು ತಾನೇ ಇಂಥದೊಂದು ಪೋಸ್ಟ್ ಹಾಕಬೇಕು ಅಂತ ಡಿಸೈಡ್ ಮಾಡಿದ್ವಿ. ಅಷ್ಟರಲ್ಲೇ ಟೀನಾ ಮುದ್ದಾಗಿ ಗದರಿಬಿಟ್ಟಿದ್ರು!

ಇರಲಿ. ಜೀವದನಿ ಮತ್ತೆ ತನ್ನ ಸದ್ದು ಕೇಳಿಸ್ಲಿಕ್ಕೆ ತಯಾರಾಗ್ತಾ ಇದೆ.
ಆದ್ರೆ, ಈ ಸಾರ್ತಿ ನಮ್ಮ ಥೀಮ್ ನಲ್ಲಿ ಕೊಂಚ ಬದಲಾವಣೆ. ನಿಮ್ಮನ್ನ ಹಾಗೇ ಕೂರಿಸ್ಕೊಂಡು ಒಂದಷ್ಟು ಕಥೆಗಳನ್ನ ಹೇಳುವಾ ಅಂತ! ಹಾಗೇ ಹಳೆಯ ’ಗಂಡಸ್ರ ಗೋಳು’ ಮುಂದುವರೆಯಲಿದೆ. ಉಳಿದ ಕಾಲಂ ಲೇಖಕರೆಲ್ಲ ಕೈ ಕೊಟ್ಟು ಬಿಟ್ಟಿದಾರೆ! ಹೀಗಾಗಿ, ಹಳೆಯ ಇನ್ಯಾವ ಕ್ಯಟಗರಿಯೂ ಇನ್ನು ಇರೋಲ್ಲ. ಕವಿತೆ, ಅನುವಾದಗಳು ಆಗೀಗ ಹಣಕಬಹುದಷ್ಟೆ!
ನಾವೆಲ್ಲ ಬೆಳೀವಾಗ ಅದೆಷ್ಟು ಕಥೆಗಳನ್ನ ಕೇಳಿಲ್ಲ, ಅದೆಷ್ಟು ಕಥೆ ಕಟ್ಟಿ ಹೇಳಿಲ್ಲ!? ಇವತ್ತಿನ ಧಾವಂತದಲ್ಲಿ ಅವೆಲ್ಲ ಮರೆತೇಹೋಗ್ಬಿಟ್ಟಿದೆ ಅಲ್ವಾ?
ಅದ್ಕೇ ನಾವೀಗ ಅಂಥ ಕಥೆಗಳನೆಲ್ಲ ಗುಡ್ಡೆ ಮಾಡ್ಕೊಂಡು ಕೂತಿದೀವಿ. ನೀವೂ ಇದರಲ್ಲಿ ಸಾಥ್ ಕೊಡ್ತೀರ?

ನಾವು ಇವನ್ನೆಲ್ಲ ಹೇಳಬೇಕೂಂತ ಇದೀವಿ…

ಪುರಾಣಗಳ ಸಾವಿರ ಸಾವಿರ ಹೆಂಡತಿಯರ ರಾಜ, ಸಾವಿರ ಕೈಗಳ ವೀರ, ಮೈಯೆಲ್ಲ ಕಣ್ಣಿನ ದೇವೇಂದ್ರ, ಲಕ್ಷ ಲಕ್ಷ ವರ್ಷಗಟ್ಟಲೆ ಬಾಳಿದ, ರಾಜ್ಯವಾಳಿದ ಅರಸರು!! ಒಂದಕ್ಕಿಂತ ಒಂದು ರಸಕವಳದಂಥ ಕಥೆಗಳು.
ಜೊತೆಗೆ, ಬಾಯಿಂದ ಬಾಯಿಗೆ ಹರಿಯುತ್ತ ಹೊಸಹೊಸ ರೂಪ, ಆಯಾಮ ಪಡೆದುಕೊಳ್ತಾ ನಮ್ಮನ್ನ ಬೆರಗಿಗೆ ನೂಕೋ ಜಾನಪದ ಕಥೆಗಳು…
ನಮ್ಮ ದೇಶದಲ್ಲಿ ಆಗಿಹೋದ ಮಹಾಮಹಾತ್ಮರ ಕಥೆಗಳು….

ಹೆದರಿಕೊಳ್ಬೇಡಿ, ಎಲ್ಲ ಪುಟಾಣಿ ಪುಟಾಣಿಯಾಗೇ ಇರುತ್ತೆ!
ಹೇಳೋಕೆ ನಾವ್ ರೆಡಿ. ಕೇಳೋಕೆ ನೀವ್ ರೆಡೀನಾ?

ನಲ್ಮೆ,

ಜೀವದನಿ ಬಳಗ

ನನಗೆ ಕ್ರಿಕೆಟ್ ಅಂದರೆ ಆರನೇ ಪ್ರಾಣ. ಪಂಚಪ್ರಾಣಗಳ ನಂತರದ ಸ್ಥಾನ ಅದಕ್ಕೇ. ಒಂದೇ ಕೊರತೆ ಅಂದ್ರೆ ಆಡಲಿಕ್ಕೆ ಬರೋಲ್ಲ! ಬೌಲಿಂಗ್ ಗೆ ನಿಂತರೆ ಎದುರಾಳಿಗಳಿಗೆ ಸುಗ್ಗಿ, ಬ್ಯಾಟಿಂಗ್ ಗೆ ಇಳಿದ್ರೆ, ನಮ್ಮವರಿಗೆ ಕಿರಿಕಿರಿ.ಆದರೂ ನಮ್ಮ ಟೀಮಿನ ಆಡದ ನಾಯಕ ನಾನು! ಹಾಗಂತ ಅವರೇನೂ ಸುಮ್ ಸುಮ್ನೆ ನನ್ನನ್ನ ನಾಯಕ ಮಾಡಿರ್ಲಿಲ್ಲ. ನಾನು ನಿಜವಾಗ್ಲೂ ಸ್ಟ್ರ್ಯಾಟಜಿ ಎಕ್ಸ್ ಪರ್ಟ್ ಆಗಿದ್ದೆ. ಯಾರಿಗೆ ಯಾವಾಗ ಬೌಲಿಂಗ್ ಕೊಡಬೇಕು? ಯಾರ ಕೈಗೆ ಬ್ಯಾಟ್ ಕೊಡಬೇಕು, ಯಾರಿಗೆ ಎಲ್ಲಿ ಚೆಂಡೆಸೆದರೆ ಮುಗ್ಗರಿಸುತ್ತಾರೆ? ಇವೆಲ್ಲವನ್ನೂ ನಾನೇ ನಿರ್ಧರಿಸ್ತಿದ್ದೆ. ಅದಕ್ಕೇ ನಾನಿಲ್ದಿದ್ರೆ ಅವರ್ಯಾರಿಗೂ ಕೈಕಾಲೇ ಆಡ್ತಿರಲಿಲ್ಲ.

ಹೀಗೆ ಕ್ರಿಕೆಟ್ ಆಡ್ಲಿಕ್ಕೇಂತಾನೇ ಮಂಡ್ಯಕ್ಕೆ ಹೋಗಿದ್ದು ನಾವು. ಸಾಯಂಕಾಲ ಏಳರ ಹೊತ್ತಿಗೆ ಆಟ ಮುಗಿಯಿತು. ರಾತ್ರಿ ಊರಿಗೆ ಹೋಗಿಬಿಟ್ಟರೆ ವಾಸಿ ಅಂತ ನಾನಂದೆ. “ಸುಮ್ನಿರೋ. ಫೀಲ್ಡಲ್ಲಿ ಬ್ಯಾಟಿಂಗ್ ಮಾಡಾಯ್ತು, ಈಗ ಹೋಟ್ಲಲ್ಲೂ ಸ್ವಲ್ಪ ಬ್ಯಾಟಿಂಗ್ ಮಾಡೋಣ” ಹಾಗಂದ ಮಂಜ. ಅವನು ಟೀಮಿನ ಬ್ಯಾಟ್ಸ್ ಮನ್. ಅವತ್ತಂತೂ ಆರಂಭದಲ್ಲಿ ಕ್ರೀಸಿಗೆ ಬಂದವನು ಟೀಂ ಗೆಲ್ಲೋವರೆಗೂ ಅಲ್ಲೇ ಇದ್ದ. ಅವನು ಚೆಂಡು ಮುಟ್ಟಿದರೆ ಅದು ಬೌಂಡರಿಯಾಚೆ! ಈಗ ಸಖತ್ತಾಗಿ ಹಸಿದಿರಬೇಕು, ಹೋಟೆಲಲ್ಲಿ ಭರ್ಜರಿಯಾಗಿ ಊಟ ಮಾಡೋಣ ಅಂತಿದಾನೆ ಇವನು ಅಂತಲೇ ನಾನು ’ಬ್ಯಾಟಿಂಗ್’ಗೆ ಅರ್ಥ ಕಟ್ಟಿಕೊಂಡಿದ್ದೆ. ನಾನು ಊಟ ಬೇಡ ಅಂದಿದ್ರೂ ಅವರೇನು ಕೇಳ್ತಿರಲಿಲ್ಲ. ಇಷ್ಟಕ್ಕೂ ನನ್ನ ಮಾತಿಗೆ ಬೆಲೆ ಇದ್ದದ್ದು ಗ್ರೌಂಡ್ ನಲ್ಲಿ ಮಾತ್ರವೇ ಹೊರತು ಅದರ ಹೊರಗಲ್ಲ!

ಟೇಬಲ್ಲಲ್ಲಿ ಊಟಕ್ಕೆ ಕುಳಿತವರು ಆಟವನ್ನ ಮೆಲುಕು ಹಾಕ್ತಿರುವಾಗ ಯಾರೋ ಮಂಜನ್ನ ಕೇಳಿದ್ರು, “ಅಲ್ಲೂ ಇಲ್ಲೂ ಎರಡೂ ಕಡೆ ಈ ಪರಿ ಬ್ಯಾಟಿಂಗ್ ಮಾಡ್ತೀಯ… ಸ್ಟ್ಯಾಮಿನಾ ಎಲ್ಲಿರುತ್ತೋ?” ಮಂಜ ನಗುತ್ತ, “ಬ್ಯಾಟಿಂಗ್ ನೆನೆಸ್ಕೊಂಡ್ರೇ ಸ್ಟ್ಯಾಮಿನಾ ಉಕ್ಕೇರುತ್ತೆ ಗೊತ್ತಾ?” ಅಂದಾಗ ನಾನು ತಲೆ ಆಡಿಸಿದೆ. ಅವನು ಒಂದು ಕುಟ್ಟಿ, “ಏನು ತಲೆ ಆಡಿಸ್ತೀಯ. ಇವತ್ತು ರಾತ್ರಿ ನಿಂಗೂ ಬ್ಯಾಟಿಂಗ್ ಕೊಡ್ತೀವಿ ಹೆದರಬೇಡ” ಅಂದ. ನನಗೆ ಒಂದೂ ಅರ್ಥವಾಗಲಿಲ್ಲ. ಬೆಳಗಿಂದ ಆಟವಾಡಿ, ಈಗ ತನೆ ಹೊಟ್ಟೆ ಬಿರಿಯ ತಿಂದು, ಮತ್ತೆ ಬ್ಯಾಟಿಂಗು ಅಂದ್ರೆ!?

ಅವರ ಮಾತುಗಳು ಮುಂದುವರಿದಂತೆ ಗೊತ್ತಾಗುತ್ತ ಹೋಯಿತು. ಅವರ ಬ್ಯಾಟಿಂಗ್ ಪಿಚ್ ಯಾವುದು ಅಂತ! ನಾನು ಕೆಟ್ಟದಾಗಿ ಸಿಕ್ಕಿಹಾಕಿಕೊಂಡೆ. ನನಗೆ ಇನ್ನೂ ಮರೆತಿಲ್ಲ. ಅದು ರೂಂ. ನಂ. ೪೦೭. ಮುಖದ ತುಂಬ ಪೌಡರು ಮೆತ್ತಿ, ಕೆಂಪು ಲಿಪ್ ಸ್ಟಿಕ್ಕು ಬಳಕೊಂಡಿದ್ದ ಹುಡುಗಿಬ್ಬಳು ಒಳಗೆ ಕುಳಿತಿದ್ದಳು. ತಲೆ ತುಂಬ ಸೇವಂತಿಗೆ ಹೂವು, ಸಾಮಾನ್ಯವಾದೊಂದು ಸೀರೆ. ನನ್ನ ಬ್ಯಾಟಿಂಗ್ ಕ್ಷೇತ್ರ!

art_modern_art-merello_transparent_portrait.jpg

ಟೀಮಿನ ಹುಡುಗರು ನನಗೆ ಪಾಠ ಮಾಡಿಯೇ ಕಳಿಸಿಕೊಟ್ಟಿದ್ದರು. ಪೋಲಿಪೋಲಿ ಮಾತುಗಳು ಇನ್ನೂ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಆದರೆ ಆಕೆಯನ್ನ ನೋಡುತ್ತಿದ್ದ ಹಾಗೇ ಎಲ್ಲವೂ ಮರೆತುಹೋದವು. ತಲೆ ತಗ್ಗಿಸಿಯೇ ಟೀವಿ ಹಾಕಿಕೊಂಡು ಕುಳಿತೆ. ಪುಟ್ಟಪುಟ್ಟ ಮಕ್ಕಳು ಎದೆತುಂಬಿ ಹಾಡ್ತಿದ್ರು.

ಐದು ಹತ್ತು ನಿಮಿಷ ಆಗಿತ್ತೇನೋ? ಆ ಹುಡುಗಿಗೂ ಅಸಹನೆ ಶುರುವಾಗಿರಬೇಕು. “ನನ್ನೇನು ನಿನ್ ಹೆಂಡ್ತಿ ಅಂದ್ಕೊಂಡ್ಯಾ? ಬೇಗ ಬೇಗ ಮುಗ್ಸು. ನೀನೊಬ್ನೇ ಸಾಕಾಗಲ್ಲ ನಂಗೆ!” ಅಂತ ಒರಟೊರಟಾಗಿ ಅಂದಳು.
“ಸಾಕಾಗಲ್ಲ ಅಂದ್ರೆ!?” ನಾನು ಅದುಹೇಗೆ ಬಾಯ್ಬಿಟ್ಟೆನೋ ಗೊತ್ತಿಲ್ಲ. ಅವಳ ದನಿಯಲ್ಲಿ ತಿರಸ್ಕಾರ, ಹತಾಶೆ, ನೋವು, ವಾಂಛೆ ಏನೇನೋ ಭಾವಗಳ ಮಿಶ್ರಣ, “ನೀ ಕೊಡೋ ಜುಜುಬಿ ಇನ್ನೂರು ರೂಪಾಯಿಗೆ ಕರ್ಚಿಪ್ಪು -ಬ್ರಾ ಕೂಡಾ ಬರಲ್ಲ. ಇನ್ನು ಸಂಸಾರ ಮಾಡೋದು ಹೇಗೆ ನಾನು?”

ಯಾಕೋ ಹೊಟ್ಟೆ ಕಿವುಚಿದಂತಾಯ್ತು. ಅವಳ ಮುಖ ಕೂಡ ಸರಿಯಾಗಿ ನೋಡದೆ ಅವಳು ಕುಳಿತಿದ್ದ ಮಂಚದ ತುದಿಯಲ್ಲಿ ಇನ್ನೂರು ರೂಪಾಯಿ ಇಟ್ಟು ಎದ್ದು ಹೊರಬಂದೆ. ಸೋಫಾದ ಮೇಲೆ ಹೊರಳಾಡಿ ಮೈ ನೋಯಿತೇ ಹೊರತು ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಬ್ಯಾಟಿಂಗ್ ಮಾಡೋ ಗಂಡಸರಿಂದಲೇ ಹೆಣ್ಣು ಮೈದಾನವಾದಳಾ? ಈ ಮೈ’ದಾನ’ದ ಹೆಣ್ಣುಗಳಿಗೆ ಎಂದಾದರೂ ಮದುವೆಯಾಗುತ್ತಾ? ಅಥವಾ ಇವರು ಈಗಾಗಲೇ ಮದುವೆ ಆಗಿ ನೊಂದು, ಹೊಟ್ಟೆಪಾಡಿಗೆ ಈ ಹಾದಿ ತುಳಿದವರಾ?
ಗಂಡನ ತೋಳತೆಕ್ಕೆಯಲ್ಲಿ ನುಲಿಯುತ್ತಾ ನಾನು ಇವತ್ತು ಕೆಲಸಕ್ಕೆ ಹೋಗಲ್ಲ ಅಂತ ಮೊಂಡಾಟ ಮಾಡೋ ಭಾಗ್ಯ ಅವರಿಗಿರತ್ತಾ? ಅಥವಾ ಜೀವನವಿಡೀ ಕಂಡಕಂಡವರ ತೋಳ ಹಸಿವಿಗೆ ಮೈಚಾಚೋದೇ ಅವರ ಕಾಯಕವಾಗಿಹೋಗತ್ತಾ?
ಹೀಗೇ… ಏನೇನೋ ಯೋಚನೆಗಳು…

ಈ ಪ್ರಶ್ನೆಗಳನ್ನೆಲ್ಲ ಅವಳ ಹತ್ತಿರವೇ ಕೇಳಲೇ ಅಂದುಕೊಂಡೆ. ಧೈರ್ಯ ಸಾಕಾಗಲಿಲ್ಲ. ಎಷ್ಟೆಂದರೂ ಆಡದ ನಾಯಕನಲ್ಲವೇ ನಾನು? ಬಿಡಿ. ಇಂಥ ಆಟ ಆಡೋದಕ್ಕಿಂತ ಆಡದಿರೋದೇ ಲೇಸು!

ಯೋಚಿಸುತ್ತಿರುವಾಗಲೇ ಮಂಜ ಹೊರಬಂದ. ನನ್ನ ಮುಖ ನೋಡಿಯೇ ಎಲ್ಲ ತಿಳಿದವನಂತೆ- “ಏನೋ ಇಷ್ಟ್ ಬೇಗ ಬಂದ್ಬಿಟ್ಟಿದೀ? ರಿಟೈರ್ಡ್ ಹರ್ಟಾ?” ಅಂದ. “ನೀನು ಗಂಡಸೇ ಅಲ್ಲ ಬಿಡು” ಅಂತಲೂ ಸೇರಿಸಿದ.
ನನ್ನ ಗಂಡೆದೆಯೊಳಗೂ ಹೆಣ್ಣು ಮನಸಿದೆ ಕಣೋ ಅನ್ನಬೇಕು ಅನಿಸ್ತು. ಹೆಣ್ಣನ್ನ ಭೋಗಿಸೋದೊಂದು ಆಟ ಅಂದ್ಕೊಂಡವನಿಗೆ ಅದೆಲ್ಲ ಅರ್ಥವಾಗದು ಅನಿಸಿ ಬಾಯ್ಮುಚ್ಚಿಕೊಂಡೆ.

“ಹಾಳು ಗಂಡಸರು!” ಹಾಗಂತಾರೆ ಹೆಣ್ಣುಮಕ್ಕಳು. “ಹಾಗೆ ’ಹಾಳು’ ಅಲ್ಲದವರು ಗಂಡಸರೇ ಅಲ್ಲ” ಅಂತಾರೆ ಗಂಡಸರು. ಹೀಗೆ ಗಂಡಸಾಗೋದಕ್ಕಿಂತ ಆಗದಿರೋದೇ ಒಳ್ಳೆಯದೆನಿಸಿತು. ಅವನ ಮೇಲೆ ಜಿಗುಪ್ಸೆ ಬಂದಂತಾಗಿ ಅಲ್ಲಿಂದೆದ್ದು ಹೊರಟೆ. ಹೊಟ್ಟೆ ತುಂಬಿಸಲಿಕ್ಕೆ ಮೈಮಾರಲು ಬಂದಿದ್ದ ಆ ಹುಡುಗಿ ಈಗ ಯಾರ ಮೈದಾನವೋ? ಯೋಚಿಸುತ್ತ ಉಳಿದೆ.

ಇದೊಂದು ಸಾರಿ ಕ್ಷಮಿಸಿಬಿಡು ಗೆಳೆಯಾ,
ಇದು ನನ್ನ ಕೊನೆಯ ವಂಚನೆ!
ನಿನ್ನ ಜಾದೂ ಪೆಟ್ಟಿಗೆಯ ಕುದುರೆ
ಮತ್ತೆಂದೂ ನಗುವುದಿಲ್ಲ
ನಂಬು, ನನ್ನಾಣೆ.

ಏನು ಮಾಡಲಿ ಹೇಳು, ಗೆಳೆಯಾ,
ಹೃದಯ ಹಾಳು ಹೆಣ್ಣು!
ನಿನ್ನ ತಿಳಿ ಮನಸಿಗೆ ನೂರೆಂಟು ಕಲ್ಲು
ಸಾಕು, ಎಸೆಯಲಾರೆ ಮತ್ತೆಂದೂ
ನೋವ ನಾನು.

ಏಕಾಗುವುದು ಮತ್ತೆ ಮತ್ತೆ ಗೆಳೆಯಾ,
ಹೀಗೆ ನನ್ನಿಂದಲೇ ತಪ್ಪು?
ನಾ ಕಲಿತ ಪಾಠವೇ ಹಾಗಿತ್ತು ಬಹುಶಃ
ದಂಡಿಸದೆ ತಿದ್ದಿ ತೀಡಿ
ಒಮ್ಮೆ ನನ್ನನಪ್ಪು.