ಹಾಗೆ ದೇವರಿದ್ದಾನೆ ಅಂತ ವೈಜ್ಞಾನಿಕವಾಗಿ ಸಾಧಿಸಿದವ ಯಾರು ಗೊತ್ತಾ?

Posted: ಸೆಪ್ಟೆಂಬರ್ 25, 2007 in ಪಿಕ್ ಪಾಕೆಟ್

ನಾನು ತುಂಬಾ ಇಷ್ಟಪಟ್ಟ ಸಂಭಷಣೆ ಇದು.ವಿದ್ಯಾರ್ಥಿ ಮತ್ತು  ಶಿಕ್ಷಕನ ನಡುವಿನದ್ದು. ವಿದ್ಯಾರ್ಥಿ ಬಲು ಚುರುಕು. ಶ್ರದ್ಧಾವಂತ. ಆದರೆ ಶಿಕ್ಷಕ ಒಬ್ಬ ತರ್ಕ ಪಂಡಿತ. ಹೀಗಾಗಿ ನಾಸ್ತಿಕ.  ಆತ ದೇವರಿಲ್ಲ ಅಂತ ವಾದಿಸೋದನ್ನೇ – ನಂಬಿಸೋದನ್ನೇ ವೃತ್ತಿಯಾಗಿಸ್ಕೊಂಡಿದ್ದ.

ಅದೊಮ್ಮೆ ತರಗತಿಯಲ್ಲಿ ಬಿರುಸಿನ ಚರ್ಚೆ. “ನೀನು ದೇವರನ್ನು ನಂಬ್ತೀಯಾ?” ಕೇಳಿದ. ” ಖಂಡಿತವಾಗಿಯೂ” ವಿದ್ಯಾರ್ಥಿಯ ಉತ್ತರ. ” ದೇವರು ಒಳ್ಳೆಯವನಾ? ಶಕ್ತಿವಂತನಾ?” ಮತ್ತೊಂದು ಪ್ರಶ್ನೆ. ” ಹೌದು” ಬಾಲಕನ ಮುಗ್ಧ ವಾಗಿ ತಲೆಯಾಡಿಸಿದ.

ಶಿಕ್ಷಕ ತನ್ನ ವರಸೆ ತೆಗೆದ. ” ನನ್ನ ಸಹೋದರನಿಗೆ ಕ್ಯಾನ್ಸರ್ ಬಂದಿತ್ತು. ಆತ ದೇವರನ್ನು ಪ್ರಾರ್ಥಿಸಿದ. ನಮ್ಮಲ್ಲಿ ಬಹಳಷ್ಟು ಜನ ಹುಷಾರಿಲ್ಲದವರಿಗೆ ಸಹಾಯ ಮಾಡುತ್ತೇನಲ್ವೇ? ಆದರೆ ಆ ದೇವರು ಮಾಡಲಿಲ್ಲ. ಹಾಗಿದ್ದ ಮೇಲೆ ಆತ ದೇವರು ಹೇಗೆ?ಈ ಪ್ರಶ್ನೆಗೆ ಏನುತ್ತರ ಕೊಡ್ತೀರಿ?” ಆ ಹುಡುಗ ಶಾಂತವಾಗಿಯೇ ಇದ್ದ. ಮತ್ತೆ ಅವನೇ ಮುಂದುವರೆಸಿದ. “ಉತ್ತರ ಇಲ್ವಲ್ಲಾ? ಹೋಗಲಿ, ಈಗ ಹೇಳಿ. ರಾಕ್ಷಸರು ಒಳ್ಳೆಯವರಾ? ಕೆಟ್ಟವರಾ?”  ಹುಡುಗಿಯೊಬ್ಬಳು ನಿಂತು, ’ಕೆಟ್ಟವರು’  ಅಂದಳು. ಮುಖದಲ್ಲಿ ಸರಿ ಉತ್ತರ ಹೇಳಿದ ಹೆಮ್ಮೆ.  ’ ಹಾಗಾದರೆ ಅವರು ಬಂದಿದ್ದೆಲ್ಲಿಂದ?’ ಚಾಲಾಕಿ ಶಿಕ್ಷಕನ ಪ್ರಶ್ನೆ. ಈ ಪ್ರಶ್ನೆಗೂ ಅದೇ ಬಾಲಕಿ ಎದ್ದು ನಿಂತು, ’ದೇವರಿಂದ’ ಅಂದಳು.

ಮತ್ತೆ ಶಿಕ್ಷಕನ ಸರದಿ. ” ದುಷ್ಟ ಶಕ್ತಿ ಎಲ್ಲೆಲ್ಲೂ ಇದೆ, ಮತ್ತು ಅದನ್ನು ದೇವರೇ ಸೃಷ್ಟಿಸ್ತಾನೆ. ಅಂದ ಮೇಲೆ ದುಷ್ಟ ಶಕ್ತಿಯ ಒಡೆಯನೂ ಅವನೇ ಅಲ್ವೇ?”

ಇದಿಯ ತರಗತಿ ಸ್ತಬ್ಧವಾಯ್ತು.ಶಿಕ್ಷಕರು ಮುಂದುವರೆಸ್ತಾ ಚಿಕ್ಕ ಭಾಷಣವನ್ನೇ ಮಾಡಿದರು. ಅನಾರೋಗ್ಯ,ಅಪ್ರಮಾಣಿಕತೆ, ದ್ವೆಷ, ಕುರೂಪಿತನ, ಇವೆಲ್ಲ ರೋಗಿಷ್ಟ ಅಂಶಗಳು ಸಮಾಜದಲ್ಲಿ ಇವೆಯಲ್ಲವೇ? ಇವೆಲ್ಲದರ ಕಾರಣಕರ್ತನೂ ಭಗವಂತನೇ ಅಲ್ವೇ?

ಊಹೂಂ… ಯಾರೊಬ್ಬರಿಂದಲೂ ಉತ್ತರವಿಲ್ಲ. ಭಾಷಣ ಮುಂದುವರೆಯಿತು. ” ವಿಜ್ಞಾನ ಹೇಳುವಮ್ತೆ ಸುತ್ತಲಿನ ಆಗುಹೋಗುಗಳನ್ನು ಅರಿಯಲು ಐದು ಇಂದ್ರಿಯಗಳಿವೆ. ಆ ಇಂದ್ರಿಯಗಳ ಅರಿವಿಗೆ ಬಾರದಿದ್ದದ್ದು ಸತ್ಯವಲ್ಲ. ಈಗ ಹೇಳಿ. ನೀವು ದೇವರನ್ನು ನೋಡಿದ್ದೀರಾ? ಅವನ ಮಾತು ಕೆಳಿದ್ದೀರಾ? ಅವನ ನ್ನು ಮುಟ್ಟಿದ್ದೀರಾ? ಮೂಸಿದ್ದೀರಾ? ನೆಕ್ಕಿರ್ುಚಿ ನೋಡಿದ್ದೀರಾ!?ಶಿಕ್ಷಕನ ದನಿ ಏರುತ್ತ ಹೋಯ್ತು. ಹುಡುಗರುಮ ಮಿಸುಕಾಡಲಿಲ್ಲ.  ಕೊನೆಗೆ ತಾನೇ, ” ವಿಜ್ಞಾನದ ಯಾವ ವಿಧಿ-ವಿಧಾನವೂ ದೆವರ ಇರುವಿಕೆ ಸಾಬೀತುಪಡಿಸುವುದಿಲ್ಲವಾದ್ದರಿಂದ, ದೇವರು ಇರುವುದು ಸಾಧ್ಯವೇ ಇಲ್ಲ!” ಎಂದು ಷರಾ ಬರೆದುಬಿಟ್ಟ.

 ಒಂದರೆ ಕ್ಷಣ ಮೌನ. ಹಿಂದಿನ ಸಾಲಲ್ಲಿ ಕುಳಿತಿದ್ದ ಹುಡುಗ ಮೆಲ್ಲನೆ ಎದ್ದು ನಿಂತು, “ಸಾರ್” ಅಂದ. ಇಡೀ ತರಗತಿ ಅವನತ್ತ ತಿರುಗಿತು. ಹುಡುಗ ಕಣ್ಣಗಲಿಸಿ, ” ಸರ್, ಬಿಸಿ ಅನ್ನೋದು ಇದೆಯಾ? “ಅಂದ.

“ಹೌದು” ಶಿಕ್ಷಕನ ಉತ್ತರ.

“ಮತ್ತೆ… ತಣ್ಣಗಿರೋದು ಅಂತಲೂ ಇದೆಯಾ?”

“ಹೌದು”

ಈಗ ಹುಡುಗ ಕೊಂಚ ದನಿ ಎತ್ತರಿಸಿದ. ” ಅದು ತಪ್ಪು. ತಣ್ಣಗಿರೋದು ಅನ್ನುವ ವಸ್ತು ಯವುದೂ ಇಲ್ಲವೆ ಇಲ್ಲ. ಬಿಸಿ, ಹೆಚ್ಚು ಬಿಸಿ, ಅತೀವ ಬಿಸಿ, ಕಡಿಮೆ ಬಿಸಿ, ಬಿಸಿಯೇ ಅಲ್ಲದ್ದು ಅಂತ ಇದೆಯೆ ಹೊರತು, ತಣ್ಣಗಿರೋದು ಅಂತ ಯವ್ದೂ ಇರೋಲ್ಲ! ತಣ್ಣಗೆ ಅನ್ನೋದನ್ನ ನಾವು ಬಿಸಿಯಲ್ಲದ್ದು ಅನ್ನೋದಕ್ಕೆ ಪರ್ಯಾಯವಾಗಿ ಬಳಸ್ತೀವಿ. ಉಷ್ಣ ಶಕ್ತಿ, ಶೀತ ಶಕ್ತಿಯಲ್ಲ, ವಿರುದ್ಧವೂ ಅಲ್ಲ. …”

ಹುಡುಗ ಹಾಗೆ ವಾದ ಮಾಡ್ತಿದ್ದರೆ, ಶಿಕ್ಷಕರು ಕಣ್ಣರಳಿಸುತ್ತಾ ಕುಳಿತಿದ್ದರು.

ಹುಡುಗ ಮತ್ತೆ ಕೇಳಿದ.” ಕತ್ತಲು ಇದೆಯೇ?”

ಶಿಕ್ಷಕ “ಹೌದು” ಅಂದ.

ಮತ್ತೆ ಹುಡುಗನ ವಾದ. ” ಕತ್ತಲು ಅಂದ್ರೆ, ಬೆಳಕಿಲ್ಲ ಅಂತ ಹೇಳೋದಕ್ಕೆ ಬಳಸೋ ಪದ. ಅದು ಬೆಳಕಿನ ವಿರುದ್ಧ ಪದ ಅಲ್ಲ.”

 ಈಗ ಶಿಕ್ಷಕನ ತಲೆ ಕೆಟ್ಟಿತು. ” ನೀನು ಹೇಳ ಹೊರಟಿರೋದು ಏನು?” ದಬಾಯಿಸಿದರು.

” ಸರ್. ನಿಮ್ಮ ತರ್ಕದ ಸರಕು ಮುಗಿದಿದೆ. ನಿಮ್ಮ ವಿಜ್ಞಾನ ಅಯಸ್ಕಾಂತದ ಆಕರ್ಷಣೆಯನ್ನು ನೋಡಿದೆಯೇ? ಆದರೆ ಅದನ್ನು ಬಳಸುತ್ತೀರಲ್ಲ, ಹೇಗೆ? ವಿದ್ಯುತ್ತಿನ ಬಣ್ಣ, ರೂಪಗಳನ್ನು ಕಂಡವರುಂಟೇ? ಮೂಸಿದವರುಂಟೇ? ಋಚಿ ನೋಡಿದವರುಂಟೇ?  ಆದರು ವಿದ್ಯುಚ್ಚಕ್ತಿಯನ್ನು ನಂಬುತ್ತೀರಲ್ಲ, ಬಳಸುತ್ತೀರಲ್ಲ? ಹೇಗೆ?  ಸಾವನ್ನು ಬದುಕಿನ ವಿರುದ್ಧ ಪದ ಅಂತ ತಿಳಿಯೋದು ಮೂರ್ಖತನವಲ್ಲವೇ?

ಶಿಕ್ಷಕನಿಗೆ ತಾನು ಸೋಲುತ್ತಿರುವ ಅರಿವಾಯಿತು.  ಹುಡುಗ ಧೈರ್ಯದಿಂದ ಮುಂದುವರೆದ.

ಇಲ್ಲಿ ನೀವು ಯಾರಾದರೂ ನಮ್ಮ ಶಿಕ್ಷಕರ ಮೆದುಳು ನೋಡಿದ್ದೀರಾ? ”

ಶಾಲೆಗೆ ಶಾಲೆಯೇ ಬಿದ್ದು ಬಿದ್ದು ನಗತೊಡಗಿತು. ” ಅವರ ಮೆದುಳಿನ ಅಂದ- ಆಕಾರ ಕಂಡಿದ್ದೀರಾ? ಋಚಿ ನೋದಿದ್ದೀರಾ?”  ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ಮೆದುಳು ಅವರಿಗೆ ಎಂದು ತಿಳಿಯುವುದರೂ ಹೇಗೆ?”

” ಅದು ನಂಬಿಕೆ” ಶಿಕ್ಷಕ ಬಾಯಿ ಹಾಕಿದ. ಅದಕ್ಕೇ ಕಾಯುತ್ತಿದ್ದವನಂತೆ ಹುಡುಗ ತತ್ ಕ್ಷಣ ಹೇಳಿದ, ” ಮಾನವ ಮತ್ತು ದೇವರ ನಡುವೆ ಇರುವುದೂ ಅದೇ ನಂಬಿಕೆ!”

ಈಗ ಶಿಕ್ಷಕನ ಸಮರ್ಥನೆಗೆ ಮಾತುಗಳೇ ಉಳಿದಿರಲಿಲ್ಲ. ವಿದ್ಯಾರ್ಥಿ ಹೇಳಿದ ಹಾಗೆ, ಅವನ ತರ್ಕದ ಸರಕು ಮುಗಿದಿತ್ತು.

ಹೀಗೆ ಅತ್ಯಂತ ಶಿಸ್ತುಬದ್ಧ ವಾದ ಸರಣಿಯಿಂದ ಶಿಕ್ಷಕನ ಬಾಯ್ಮುಚ್ಚಿಸಿ ದೇವರ ಇರುವಿಕೆಯನ್ನ ಎತ್ತಿಹಿಡಿದವರು ಯಾರು ಗೊತ್ತೇ? ಅವರು ’ ಆಲ್ಬರ್ಟ್ ಐನ್’ ಸ್ಟೀನ್!

ವಿಜ್ಞಾನ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಐನ್ ಸ್ಟೀನ್, ಎಂದೂ ದೇವರನ್ನು ಹಳಿದವನಲ್ಲ. ಅವನು ಮಾತ್ರವಲ್ಲ, ನಿಜವಾದ ವಿಜ್ಞಾನಿಗಳೆಲ್ಲರಿಗೂ ವಿಜ್ಞಾನದ, ಮಾನವನ ಮಿತಿಗಳ ಅರಿವಿರುತ್ತದೆ. ಹೀಗಾಗಿಯೇ ಬಹುತೇಕ ಸುಪ್ರಸಿದ್ಧ ವಿಜ್ಞಾನಿಗಳು ಆಸ್ತಿಕರು. ಶ್ರದ್ಧಾವಂತರು. ಆದರೆ ಅರೆ ಬೆಂದ ನಮಗೆ ಅದು ಅರ್ಥವಾಗೋದೇ ಇಲ್ಲ. ಯಂತ್ರಗಳು, ಭೂಗೋಳ- ಖಗೋಳಗಳು, ಆವಿಶ್ಕಾರಗಳಷ್ಟೇ ವಿಜ್ಞಾನ ಅನ್ನುವ ಭಾವನೆ ನಮ್ಮದು ರೈತ ಹೊಲ ಉಳುವಾಗ ನೇಗಿಲೆಳೆಯುವುದೂ ವಿಜ್ಞಾನ ಅನ್ನೋದನ್ನ ಅರಗಿಸಿಕೊಳ್ಳಲು ನಮ್ಮಿಂದಾಗದು. ಕಡಿದಾದ ರಸ್ತೆಯಲ್ಲಿ ಗಾಡಿ ಓಡಿಸುವವ ಬಾಗೋದು ಸೆಂಟ್ರಿಫ್ಯುಗಲ್ ಫೋರ್ಸಿಗೆ ಉದಾಹರಣೆ ಅಂದರೆ ತೃಪ್ತಿಯಾಗದು. ನಮ್ಮ ಪಾಲಿಗೆ ವಿಜ್ಞಾನ, ದೈನಂದಿನ ಜಗತ್ತಿಗೆ ದೂರವಿರುವ, ಆವಿಷ್ಕಾರಗಳ ಸಿದ್ಧಾಂತ. ವಿಜ್ಞಾನ- ಶುದ್ಧ ನಾಸ್ತಿಕವಾದ!

ಐನ್ ಸ್ಟೀನ್ ನನ್ನು, ಅವನಂಥ ಶ್ರದ್ಧಾ-ವಿಚಾರವಂತ ವಿಜ್ಞಾನಿಗಳನ್ನು ಸಾಕಷ್ಟು ನೋಡಿದ್ದರೂ, ಈಗಲೂ ನೋಡುತ್ತಿದ್ದರೂ ನಮಗೆ ಮಾತ್ರ ಬುದ್ಧಿ ಬರುವುದೇ ಇಲ್ಲ. ನಾವು, ತುಂಬಿದ ಕೊಡಗಳಾಗಲು ಸಾಧ್ಯವೇ ಇಲ್ಲ!!

 ಚಕ್ರವರ್ತಿ ಸೂಲಿಬೆಲೆ ಬರಹ ಸಂಗ್ರಹದಿಂದ ಕದ್ದಿದ್ದು.

Advertisements
ಟಿಪ್ಪಣಿಗಳು
 1. Apoorva ಹೇಳುತ್ತಾರೆ:

  chakravartiyavarige Namaskara

  nIvu hELOdu sari. vijnana andare nastikavaada antalE nAvu tilidirOdu mUrkhatanavashTe.
  ‘Jana meccida rAshtrapati’ Abdul kalAm kUDa obba Astikaru.

 2. Seshadri ಹೇಳುತ್ತಾರೆ:

  ನಮಸ್ಕಾರ.

  ಐನ್‍ಸ್ಟೈನನ ಜೀವನದಲ್ಲಿ ನಿಜಕ್ಕೂ ಇಂತಹ ಘಟನೆ ನಡೆಯಿತೇ?
  ಹಲವಾರು ಸುಪ್ರಸಿದ್ಧ ವಿಜ್ಞಾನಿಗಳು ಆಸ್ತಿಕರಾಗಿರಬಹುದಾದರೂ, ಸಾಮಾನ್ಯ ಜನತೆಗಿಂತ ವಿಜ್ಞಾನಿಗಳಲ್ಲಿ ನಾಸ್ತಿಕರ ಸಂಖ್ಯೆ ಹೆಚ್ಚು.

  ವಿಕಿಪೀಡಿಯಾದ ಉಲ್ಲೇಖ:
  “A study has shown atheism to be particularly prevalent among scientists, a tendency already quite marked at the beginning of the 20th century, developing into a dominant one during the course of the century. In 1914, James H. Leuba found that 58% of 1,000 randomly selected U.S. natural scientists expressed “disbelief or doubt in the existence of God” (defined as a personal God which interacts directly with human beings). The same study, repeated in 1996, gave a similar percentage of 60.7%; this number is 93% among the members of the National Academy of Sciences. Expressions of positive disbelief rose from 52% to 72%.[9] (See also The relationship between religion and science.)”

  ವಂದನೆಗಳು,

  ಶೇಷಾದ್ರಿ

 3. jeevadani ಹೇಳುತ್ತಾರೆ:

  ನಮಸ್ತೇ.

  ವಿಕಿಪೀಡಿಯಾದ ಉಲ್ಲೆಖ ಉನ್ನತ ಸ್ತರದ ವಿಜ್ಞಾನಿಗಳದೇ ಎಂದು ಸ್ಪಷ್ಟವಾಗಿಲ್ಲ.
  ಐನ್ ಸ್ಟೀನ್ ಘಟನೆಯ ಉಲ್ಲೇಖ ಸಾಕಷ್ಟು ಕಡೆಗಳಲ್ಲಿ ಓದಿದ್ದೇನೆ. ಮತ್ತು ಆತನೊಬ್ಬ ಆಸ್ತಿಕ ಮಹಾಶಯನಾಗಿದ್ದರೆನ್ನುವುದು ಅವರ ಜೀವನ ಚರಿತ್ರೆಯಿಂದ ಸಾಬೀತಾಗುವುತ್ತದೆ.
  ವಿಜ್ಞಾನಿಗಳು ಬಹುತೇಕ ಆಸ್ತಿಕರಾಗಿರುತ್ತಾರೆ ಮತ್ತು ಅಗೋಚರ ಶಕ್ತಿಯ ಅಪಾರ ಸಾಧ್ಯತೆಗಳ ಬಗ್ಗೆ ಕುತೂಹಲವಿಟ್ಟುಕೊಂಡೇ ಸಂಶೋಧನೆಗೆ ಮುಂದಾಗುತ್ತಾರೆ ಎನ್ನುವುದು ನನ್ನ ನಂಬಿಕೆ. ನಮ್ಮ ಭಾರತದಲ್ಲಂತೂ ಕಣಾದನಿಂದ ಕಲಾಮ್ ದಾದಾರ ವರೆಗೆ ಎಲ್ಲ ವಿಜ್ಞಾನಿಗಳೂ ಮಹಾನ್ ಆಸ್ತಿಕರೇ! ಇಂದಿಗೂ ಇಸ್ರೋದವರು ಹೊಸ ಯೋಜನೆಗಳ ಆರಂಭಕ್ಕೆ ಮುನ್ನ, ಉಡಾವಣೆಗೆ ಮುನ್ನ ಪೂಜೆ,ಇತ್ಯಾದಿ ಮಾಡುವುದನ್ನು ನೀವು ಕೇಳಿರಬಹುದು.
  ನಮ್ಮಲ್ಲಿ ಮಾತ್ರವಲ್ಲ, ಇವತ್ತಿನ ಶ್ರೇಷ್ಠ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬ್ಲ್ಯಾಕ್ ಹೋಲ್ ಗಳ ಬಗ್ಗೆ ಅಧ್ಯಯನ ನಡೆಸಿದ ನಂತರ, ’ಇವೆಲ್ಲವನ್ನೂ ನೋಡಿದ ನಂತರ ನಮಗೆ ಅರ್ಥವೇ ಆಗದ ಶಕ್ತಿಯೊಂದಿದೆ. ಅದು ನಮಗೆ ನಿಲುಕದ ಮಹಾನ್ ಶಕ್ತಿಯೇ ಸರಿ’ ಎಂದಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಆತನಿಗೆ ಭಾರತದ ಬಗ್ಗೆ ಅಷ್ಟೊಂದು ಪ್ರೇಮ!

 4. Sanjaya ಹೇಳುತ್ತಾರೆ:

  ನಮಸ್ಕಾರ.

  ಈ ಚರ್ಚೆಯನ್ನು ಮುಂದುವರೆಸಿತ್ತುರುವುದಕ್ಕೆ ಕ್ಷಮಿಸಿ.

  “ವಿಜ್ಞಾನ” ಮತ್ತು “ದೇವರಲ್ಲಿ ನಂಬಿಕೆ” ಇವೆರಡೂ ನನಗೆ ಆಸಕ್ತಿಯ ವಿಷಯಗಳು. ಹೀಗಾಗಿ ಇವೆರಡರ ನಡುವಿನ ತಿಕ್ಕಾಟ ನನಗೆ ಅತ್ಯಂತ ಕುತೂಹಲದ ವಿಷಯ.

  ಐನ್‌ಸ್ಟೈನನ ಜೀವನ ಚರಿತ್ರೆಯ ಕೆಲವೊಂದು ಪುಸ್ತಕಗಳನ್ನು ನಾನು ಓದಿರುವೆನಾದರೂ, ಈ ಪುಸ್ತಕಗಳಲ್ಲಿ ನೀವು ತಿಳಿಸಿರುವ ಘಟನೆಯ ಪ್ರಸ್ತಾಪವನ್ನು ಓದಿಲ್ಲ. ಹಾಗೆಂದು, ಆ ಘಟನೆ ನಡೆದೇ ಇಲ್ಲವೆಂದಲ್ಲ. ಇದರ ಕುರಿತು ಮೂಲಾಧಾರಗಳೇನಾದರೂ ಇದ್ದಲ್ಲಿ ತಿಳಿದುಕೊಳ್ಳುವ ಆಸಕ್ತಿ ಅಷ್ಟೇ.

  ಐನ್‍ಸ್ಟೈನ್ “ಆಸ್ತಿಕ” ಎಂಬುದು ಕೊಂಚ ವಿವಾದಾಸ್ಪದ ವಿಷಯ. ನಾನು ತಿಳಿದಿರುವಂತೆ ಹೆಚ್ಚೆಂದರೆ ಆತನೊಬ್ಬ “ಅಗ್ನಾಸ್ಟಿಕ್” ಅಷ್ಟೇ. ರಿಚರ್ಡ್ ಡಾಕಿನ್ಸ್ ತನ್ನ “ದಿ ಗಾಡ್ ಡೆಲ್ಯೂಷನ್” ಪುಸ್ತಕದಲ್ಲಿ ದೇವರ ಕುರಿತು ಐನ್‍ಸ್ಟೈನನ ಅಭಿಪ್ರಾಯಗಳನ್ನು ಪ್ರಸ್ತಾಪಿಸುತ್ತಾನೆ. ಅವು ಯಾವುವೂ ಆತನೊಬ್ಬ “ಆಸ್ತಿಕ ಮಹಾಶಯ” ಎಂಬುದಕ್ಕೆ ಪುರಾವೆಯನ್ನೊದಗಿಸುವುದಿಲ್ಲ.

  ವಿಕಿಪೀಡಿಯಾದ ಉಲ್ಲೇಖದಲ್ಲಿ ಪ್ರಸ್ತಾಪಿಸುವ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್, ಅಮೆರಿಕದ ಅತ್ಯಂತ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದು. ಅದರ ಸದಸ್ಯತ್ವ ಹೊಂದುವುದು ಸುಲಭ ಸಾಧ್ಯವಲ್ಲ ಮತ್ತು ನೂರಾರು ನೊಬೆಲ್ ಪ್ರಶಸ್ತಿ ವಿಜೇತರನ್ನು ಸದಸ್ಯರನ್ನಾಗಿ ಹೊಂದಿರುವ ಆ ಸಂಸ್ಥೆಯ ಸದಸ್ಯತ್ವವಕ್ಕೆ ಆಯ್ಕೆಯಾಗುವುದು ವಿಜ್ಞಾನಿಗಳಿಗೆ ಅತ್ಯಂತ ಗೌರವದ ವಿಷಯ.

  ವಿಜ್ಞಾನಿಗಳಿಗೂ, “ಉನ್ನತ ಸ್ತರದ” ವಿಜ್ಞಾನಿಗಳಿಗೂ ದೇವರ ಕುರಿತು ನಂಬಿಕೆಯಲ್ಲಿ ವ್ಯತ್ಯಾಸವಿದೆಯೇ? ನನಗೆ ತಿಳಿದಿಲ್ಲ.

  ಇಸ್ರೋ ಉಡಾವಣೆಯ ಮುಂಚೆ ಪೂಜೆ, ಹೋಮಾದಿಗಳನ್ನು ನಡೆಸುವುದನ್ನು ಓದಿದ್ದೇನೆ. ಆದರೆ ಅದು ಅಲ್ಲಿನ ವಿಜ್ಞಾನಿಗಳ ನಂಬಿಕೆಯ ಅಭಿವ್ಯಕ್ತಿಯೇ ಅಥವಾ ಭಾರತೀಯ ಸಂಸ್ಕೃತಿಯ ಆಚಾರ (ಸಂಪ್ರದಾಯ, ಮೂಢ ನಂಬಿಕೆ?)ಗಳ ಅಭಿವ್ಯಕ್ತಿಯೇ? ನನಗೆ ತಿಳಿಯದು.

  “ವಿಜ್ಞಾನ ಮತ್ತು ದೇವರಲ್ಲಿ ನಂಬಿಕೆ” ವಿಚಾರವನ್ನು ಚರ್ಚಿಸುವಾಗ “ದೇವರು” ಎಂಬುದನ್ನು ಕೊಂಚ ಗೊಂದಲ ರಹಿತವಾಗಿ ವಿವರಿಸುವುದು ಅಗತ್ಯವೆಂದು ನನ್ನ ಭಾವನೆ. ಉದಾಹರಣೆಗೆ, ಕ್ಯಾನ್ಸರ್ ರೋಗಿಯ ಪ್ರಾರ್ಥನೆಗೆ ದೇವರು ಓಗೊಡುತ್ತಾನೆ ಎಂಬ ನಂಬಿಕೆ ಮತ್ತು ಪ್ರಕೃತಿಯೇ ದೇವರು ಎಂಬ ನಂಬಿಕೆಗೂ ವ್ಯತ್ಯಾಸವಿದೆ. ಎರಡೂ ನಂಬಿಕೆಯನ್ನು ಒಂದುಗೂಡಿಸಿ ಎರಡು ನಂಬಿಕೆಯುಳ್ಳವರೂ “ಆಸ್ತಿಕ”ರೆನ್ನಬಹುದೇ? ನನ್ನ ಅಭಿಪ್ರಾಯದಲ್ಲಿ ಇದು ಸರಿಯೆನ್ನಿಸುವುದಿಲ್ಲ.

  ಐನ್‌ಸ್ಟೈನ್ ತನ್ನ ಬಾಲ್ಯ ಜೀವನದಲ್ಲಿ ಎಂತಹ ದೇವರನ್ನು ನಂಬಿದ್ದನೋ ನನಗೆ ತಿಳಿದಿಲ್ಲ. ಆದರೆ, ದೊಡ್ಡವನಾದ ಮೇಲೆ, ಆತ ಕ್ಯಾನ್ಸರ್ ರೋಗಿಯ ಪ್ರಾರ್ಥನೆಗೆ ಓಗೊಡುವ ದೇವರನ್ನು ನಂಬಿದ್ದನೆನ್ನುವುದು ಕಷ್ಟ.

  ಹಾಗೆಯೇ, ಸ್ಟೀಫನ್ ಹಾಕಿಂಗ್ “ಆಸ್ತಿಕ” ಎನ್ನುವುದೂ ಸಹ ಚರ್ಚಾಸ್ಪದ ವಿಷಯ. ಬ್ರಹ್ಮಾಂಡದ ಬಗೆಗೆ ಮಾತನಾಡುತ್ತಾ ಅವನೆನ್ನುತ್ತಾನೆ:
  What I have done is to show that it is possible for the way the universe began to be determined by the laws of science. In that case, it would not be necessary to appeal to God to decide how the universe began. This doesn’t prove that there is no God, only that God is not necessary. [Stephen W. Hawking, Der Spiegel, 1989]

  ದೇವರ ವಿಚಾರದಲ್ಲಿ “ಉನ್ನತ ಸ್ತರದ” (ಪ್ರಸಿದ್ಧ?) ವಿಜ್ಞಾನಿಗಳ ನಂಬಿಕೆ ಏನು ಎಂಬುದು ಕುತೂಹಲದ ವಿಚಾರವಾದರೂ, ನನ್ನ ಅಭಿಪ್ರಾಯದಲ್ಲಿ ಆ ನಂಬಿಕೆಯ ತಳಹದಿಯನ್ನು ತಿಳಿಯುವುದು ಮುಖ್ಯ ಎನಿಸುತ್ತದೆ. ನ್ಯೂಟನ್, ಜಗತ್ತು ಈ ವರೆಗೆ ಕಂಡ ಅತ್ಯಂತ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬ. ಅವನೊಬ್ಬ “ಆಸ್ತಿಕ ಮಹಾಶಯ” ಹಾಗೆಯೇ ಆಲ್ಕೆಮಿಯಂತಹುದರಲ್ಲಿ ಆಸಕ್ತಿ ಉಳ್ಳವನು ಸಹ!

  ವಂದನೆಗಳೊಂದಿಗೆ,
  ಶೇಷಾದ್ರಿ

 5. jeevadani ಹೇಳುತ್ತಾರೆ:

  ಈ ಚರ್ಚೆಯನ್ನು ಮುಕ್ತವಾಗಿರಿಸಲಾಗಿದೆ. ಆಸಕ್ತರು ಮುಂದುವರೆಸಬಹುದು.
  ಲೇಖನದ ಲೇಖಕರನ್ನು ಸಂಪರ್ಕಿಸಿ ಅವರಿಂದಲೇ ಉತ್ತರ ಪಡೆಯುವ ಪ್ರಯತ್ನ ಸಾಗಿದೆ.
  ಸಾಧ್ಯವಾದಲ್ಲಿ ಅವರ ಅಭಿಪ್ರಾಯವನ್ನು ಪಡೆದು ಪ್ರಕಟಿಸಲಾಗುವುದು.

  ಶೇಷಾದ್ರಿ ಅವರಿಗೆ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s