ಇದೊಂದು ಸಾರಿ ಕ್ಷಮಿಸಿಬಿಡು ಗೆಳೆಯಾ,
ಇದು ನನ್ನ ಕೊನೆಯ ವಂಚನೆ!
ನಿನ್ನ ಜಾದೂ ಪೆಟ್ಟಿಗೆಯ ಕುದುರೆ
ಮತ್ತೆಂದೂ ನಗುವುದಿಲ್ಲ
ನಂಬು, ನನ್ನಾಣೆ.
ಏನು ಮಾಡಲಿ ಹೇಳು, ಗೆಳೆಯಾ,
ಹೃದಯ ಹಾಳು ಹೆಣ್ಣು!
ನಿನ್ನ ತಿಳಿ ಮನಸಿಗೆ ನೂರೆಂಟು ಕಲ್ಲು
ಸಾಕು, ಎಸೆಯಲಾರೆ ಮತ್ತೆಂದೂ
ನೋವ ನಾನು.
ಏಕಾಗುವುದು ಮತ್ತೆ ಮತ್ತೆ ಗೆಳೆಯಾ,
ಹೀಗೆ ನನ್ನಿಂದಲೇ ತಪ್ಪು?
ನಾ ಕಲಿತ ಪಾಠವೇ ಹಾಗಿತ್ತು ಬಹುಶಃ
ದಂಡಿಸದೆ ತಿದ್ದಿ ತೀಡಿ
ಒಮ್ಮೆ ನನ್ನನಪ್ಪು.
ಏಕಾಗುವುದು ಮತ್ತೆ ಮತ್ತೆ ಗೆಳೆಯಾ,
ಹೀಗೆ ನನ್ನಿಂದಲೇ ತಪ್ಪು?
ನಾ ಕಲಿತ ಪಾಠವೇ ಹಾಗಿತ್ತು ಬಹುಶಃ
ದಂಡಿಸದೆ ತಿದ್ದಿ ತೀಡಿ
ಒಮ್ಮೆ ನನ್ನನಪ್ಪು.
ಮಿತ್ರರೇ ಈ ಸಾಲುಗಳು ನನಗೆ ತುಂಬಾ ಹಿಡಿಸಿದವು. ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಬ್ರಹ್ಮಾನಂದ.ಎನ್.ಹಡಗಲಿ