ನಭಗನ ಪುತ್ರ ನಾಭಾಗ

Posted: ಜನವರಿ 26, 2008 in ಪುರಾಣ

ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.

ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ ಜೊತೆಯಲ್ಲಿ ನಭಗನನ್ನು ಕಳುಹಿಸಿಕೊಟ್ಟರು.

ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಮಕ್ಕಳ ಬಗ್ಗೆ ನಭಾಗನಿಗೆ ಬೇಸರವಾಯಿತು. ಅವನ ಮೇಲಿನ ಕರುಣೆಯಿಂದ ಎರಡು ವಿಶೇಷ ಮಂತ್ರಗಳನ್ನು ಅವನಿಗೆ ನೀಡಿ, “ಅಂಗೀರನ ವಂಶಸ್ಥರು ಈಗೊಂದು ಮಹಾ ಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು. ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ತುಷ್ಟರಾಗುವ ಅವರು ಯಜ್ಞದ ನಂತರ ಉಳೀಯುವ ಸಂಪತ್ತನ್ನು ನಿನಗೆ ನೀಡುವರು” ಎಂದು ಸೂಚಿಸಿದನು.

ಅದರಂತೆ ನಾಭಾಗನು ಯಜ್ಞ ಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಟಿಸಿದನು. ಅಂಗೀರ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ ಈ ಯಜ್ಞ ಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು” ಎಂದು ತಡೆದನು.

ಕೊನೆಗೆ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ನಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ಆತನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು. ಅದರಂತೆ, ಆ ಎಲ್ಲವನ್ನು ಆತನಿಗೇ ಅರ್ಪಿಸುವಂತೆ ಮಗನಿಗೆ ಹೇಳಿದನು. ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನು ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು.

ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಅದನ್ನು ಆತನಿಗೇ ಮರಳಿಸಿ, ಜೊತೆಗೆ ದಿವ್ಯ ಜ್ಞಾನವನ್ನೂ ಕರುಣಿಸಿ ಅಂತರ್ಧಾನನಾದನು.

– ಈ ಕಥೆ, ಭಾಗವತದ ೯ನೇ ಸ್ಕಂಧ, ೪ನೇ ಅಧ್ಯಾಯದಲ್ಲಿ ಬರುತ್ತದೆ. ಸಾತ್ತ್ವಿಕ ಮನಸ್ಸು, ಹಿರಿಯರ ಮಾತಿನಲ್ಲಿ ಗೌರವವಿರುವ ಯಾವ ವ್ಯಕ್ತಿಯೇ ಆದರೂ ವಿಶೇಷ ಕೃಪೆಗೆ ಪಾತ್ರನಾಗುತ್ತಾನೆ ಎನ್ನುವುದು ಈ ಕಥೆಯ ತಿರುಳು.

ಟಿಪ್ಪಣಿಗಳು
  1. ತೇಜಸ್ವಿನಿ ಹೆಗಡೆ ಹೇಳುತ್ತಾರೆ:

    ನಮಸ್ಕಾರ. ಕಥೆ ತುಂಬಾ ಚೆನ್ನಾಗಿದೆ. ನಿಮ್ಮ ಬ್ಲಾಗ್ ಉಳಿದೆಲ್ಲದರಕ್ಕಿಂತ ತುಂಬಾ ವಿಶಿಷ್ಟವಾಗಿದೆ. ತುಂಬಾ ಇಷ್ಟವಾಯಿತು. ಕಥೆಯ ನೀತಿ “ನಚಿಕೇತ”ನ ಕಥೆಯನ್ನು ಹೋಲುತ್ತದೆ.

  2. jeevadani ಹೇಳುತ್ತಾರೆ:

    Dhanyavaada. Tina mattu tejasvini avarige.
    nimma protsaahave namma utsaaha!

    – JD balaga

  3. navada ಹೇಳುತ್ತಾರೆ:

    ಜೀವದನಿಗೆ

    ಕಥೆಗಳು ಚೆನ್ನಾಗಿವೆ. ಸುಮ್ಮನೆಂದು ಈ ಬ್ಲಾಗ್ ಗೆ ಬಂದೆ. ಖುಷಿಯಾಯಿತು. ಇನ್ನಷ್ಟು ಕಥೆಗಳಿಗೆ ಬೇಡಿಕೆ ಸಲ್ಲಿಸುತ್ತಾ…ನಮಸ್ಕಾರ.
    ನಾವಡ

  4. jogi ಹೇಳುತ್ತಾರೆ:

    ಕತೆ ತುಂಬಾ ಚೆನ್ನಾಗಿದೆ. ಪುರಾಣಗಳನ್ನು ಸಾಕಷ್ಟು ತಿರುವಿ ಹಾಕುತ್ತೇನಾದರೂ ಇದನ್ನು ಓದಿರಲಿಲ್ಲ. ಜೀವದನಿ ಬಳಗಕ್ಕೆ ಥ್ಯಾಂಕ್ಸೂ..
    -ಜೋಗಿ

  5. jeevadani ಹೇಳುತ್ತಾರೆ:

    ನಾವಡರೇ, ಧನ್ಯವಾದ. ಕಣಜದಲ್ಲಿ ಸಾಕಷ್ಟು ಕಥೆಗಳಿವೆ. ಅವನ್ನು ಎಲ್ಲರಿಗೂ ಹಂಚಬೇಕೆಂದೇ ನನ್ನ ಆಸೆ.

    ಜೋಗಿಯವರಿಗೆ ತುಂಬಾ ಥ್ಯಾಂಕ್ಸ್. ನೀವು ಓದಿರದ ಮತ್ತಷ್ಟು ಕಥೆಗಳನ್ನು ಕೊಡುವ ಉತ್ಸಾಹ ನನ್ನದಾಗಲಿ!

    – ಜೀ.ದ. ಬಳಗ

  6. Vivek Shankar ಹೇಳುತ್ತಾರೆ:

    namskara,

    On the occasion of 8th year celebration of Kannada saahithya. com we are arranging one day seminar at Christ college.

    As seats are limited interested participants are requested to register at below link.

    Please note Registration is compulsory to attend the seminar.

    If time permits informal bloggers meet will be held at the same venue after the seminar.

    For further details and registration click on below link.

    http://saadhaara.com/events/index/english

    http://saadhaara.com/events/index/kannada

    Please do come and forward the same to your like minded friends

  7. Vivek Shankar ಹೇಳುತ್ತಾರೆ:

    kathegalu tumba channagidey

  8. basavarajutv ಹೇಳುತ್ತಾರೆ:

    kate tumba channagide

Leave a reply to Vivek Shankar ಪ್ರತ್ಯುತ್ತರವನ್ನು ರದ್ದುಮಾಡಿ