Archive for ಸೆಪ್ಟೆಂಬರ್, 2015

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ.

ತರೈನ್ನ ಮೊದಲ ಯುದ್ಧ ಅದು. ಪೃಥ್ವಿರಾಜ್ ಚೌಹಾನ್ ಮಹಮ್ಮದ್ ಘೋರಿಯನ್ನು ಸೋತು ಸುಣ್ಣವಾಗಿಸಿ ಕಾಲಿಗೆ ಕೆಡವಿಕೊಂಡಿದ್ದ. ಘೋರಿ ಮಂದಿರಗಳನ್ನು ಧ್ವಂಸ ಮಾಡುವ, ಹಿಂದೂಗಳ ಮೇಲೆ ಅತ್ಯಾಚಾರದ ಸರಣಿಯನ್ನೇ ನಡೆಸುವ ಕ್ರೂರಿ ಎಂಬುದು ಗೊತ್ತಿದ್ದಾಗಲೂ ಪೃಥ್ವಿರಾಜ್ ಅವನನ್ನು ಕ್ಷಮಿಸಿ ಬಿಟ್ಟುಬಿಟ್ಟ.
ತನ್ನ ತೆಕ್ಕೆಗೆ ಉಡುಗೊರೆಯಾಗಿ ಬಂದ ಮುಸ್ಲೀಂ ಹೆಣ್ಣುಮಗಳನ್ನು ಮಾನಭಂಗ ನಡೆಸಿ ಅವರಂತೆ ಕ್ರೂರವಾಗಿ ನಡೆದುಕೊಳ್ಳುವ ಅವಕಾಶ ಇದ್ದಾಗಲೂ ಶಿವಾಜಿ ಮಹಾರಾಜರು ಹಾಗೆ ಮಾಡಲಿಲ್ಲ. ಹಿಂದುವಿನ ರಕ್ತಕ್ಕೆ ತಕ್ಕಂತೆ ನಡೆದುಕೊಂಡರು. ಆ ಹೆಣ್ಣು ಮಗಳನ್ನು ಅತ್ಯಂತ ಗೌರವದಿಂದ ಸಂಭಾಳಿಸಿ ಮನೆಗೆ ಕಳಿಸಿಕೊಟ್ಟರು.
ಬುದ್ಧ ವೈದಿಕ ಪರಂಪರೆಯನ್ನು ಕೆಟ್ಟದಾಗಿ ಆಚರಿಸುವವರ ವಿರುದ್ಧ ಸಿಡಿದೆದ್ದ. ಪ್ರೇಮಮಾರ್ಗದಲ್ಲಿ ನಡೆದ. ಅವನ ಅನುಯಾಯಿಗಳು ಹಿಗ್ಗಿದರು. ವೈದಿಕ ಧರ್ಮದ ಅನುಯಾಯಿಗಳ ಸಂಖ್ಯೆ ಕಡಿಮೆಯಾಗುತ್ತ ನಡೆಯಿತು. ಆದರೆ ಎಲ್ಲಿಯೂ ಕೊಲೆಗಳು ನಡೆಯಲಿಲ್ಲ. ಮುಂದೆ ಶಂಕರರು ವೈದಿಕ ಆಚರಣೆಗಳನ್ನು ಮರುಸ್ಥಾಪಿಸುವಾಗ ಬುದ್ಧನ ಅನುಯಾಯಿಗಳೊಂದಿಗೆ ಚಚರ್ೆಗೆ ಕುಳಿತರು. ವಾದದಲ್ಲಿ ಸೋಲಿಸಿದರು. ತಮ್ಮ ಅನುಯಾಯಿಯಾಗಿಸಿಕೊಂಡರು. ಎಲ್ಲಿಯೂ ‘ವೇದ ವಿರೋಧಿ’ಯಾದವರನ್ನು ಕೊಂದ ಉಲ್ಲೇಖಗಳಿಲ್ಲ. ಇದು ಆನಂತರ ಧೂರ್ತ ಎಡಚರ ಕೈವಾಡದಿಂದ ತುರುಕಿದ ಇತಿಹಾಸವಾಯ್ತು ಅಷ್ಟೇ.
ದ್ವೈತ-ಅದ್ವೈತಗಳ ನಡುವೆ ಚಚರ್ೆಗಳು ಸಾಕಷ್ಟು ನಡೆದಿವೆ, ಕೇಳಲಾಗದ ಮಟ್ಟಕ್ಕೆ ಈಗಲೂ ನಡೆಯುತ್ತಿವೆ. ಹಾಗಂತ ಯಾರೂ ಒಬ್ಬರನ್ನೊಬ್ಬರು ಚಾಕುವಿನಿಂದ ಇರಿದು ಕೊಲ್ಲಲಿಲ್ಲ. ದಯಾನಂದರು ಇಸ್ಲಾಂ-ಕ್ರಿಶ್ಚಿಯಾನಿಟಿಗಳ ಮೇಲಷ್ಟೇ ಅಲ್ಲ ಹಿಂದೂಧರ್ಮದೊಳಗಿನ ಆಚರಣೆಗಳ ಮೇಲೂ ಗದಾಪ್ರಹಾರ ಮಾಡಿದರು. ಅವರನ್ನು ಹಿಂದೂಗಳು ಗೌರವದಿಂದಲೇ ಸ್ವೀಕರಿಸಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡರು. ಆದರೆ ಅವರನ್ನು ಕೊಲ್ಲಲು ಪ್ರಯತ್ನಪಟ್ಟಿದ್ದು ಒಬ್ಬ ಮುಸಲ್ಮಾನನೇ, ನೆನಪಿರಲಿ. ವಿವೇಕಾನಂದರು ಹಿಂದೂಗಳನ್ನು ಬೈದಿರುವುದನ್ನು ಕೇಳಿದರೆ ಗೊಂದಲಕ್ಕೆ ಬಿದ್ದು ಬಿಡುವಿರಿ. ಆದರೆ ಅವರ ಮಾತುಗಳನ್ನು ಇಂದಿಗೂ ತಿದ್ದಿಕೊಳ್ಳುವ ಪ್ರಯತ್ನ ಹಿಂದೂ ಸಮಾಜ ಮಾಡುತ್ತಲೇ ಇದೆ!
ಇಷ್ಟನ್ನೂ ಅದೇಕೆ ಹೇಳಬೇಕಾಯ್ತೆಂದರೆ ಇತ್ತೀಚೆಗೆ ಡಾ|| ಎಂ ಎಂ ಕಲಬುಗರ್ಿಯವರ ಹತ್ಯೆಯಾದೊಡನೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾಧ್ಯಮಗಳೆಲ್ಲ ಹಿಂದೂ ಕಠೋರವಾದಿಗಳು ಈ ಕೊಲೆಯ ಹಿಂದಿದ್ದಾರೆಂಬ ಏಕಪಕ್ಷೀಯ ನಿರ್ಣಯ ಕೈಗೊಂಡುಬಿಟ್ಟರು. ಕಲಬುಗರ್ಿಯವರು ಆಡಿದರೆನ್ನಲಾದ ನಾಲ್ಕಾರು ಮಾತುಗಳನ್ನು ಕೇಳಿ ಹಿಂದೂ ಅವರನ್ನು ಕೊಲ್ಲುವಷ್ಟು ರಕ್ತ ಹಾಳು ಮಾಡಿಕೊಂಡಿರಬಹುದೆಂದು ಯಾರೂ ನಂಬಲಾಗದ ಕಟ್ಟು ಕಥೆ. ಆಕ್ರೋಶದಿಂದ ಒಂದಿಬ್ಬರು ಫೇಸ್ಬುಕ್ನಲ್ಲಿ ಹಾಕಿಕೊಂಡ ಸ್ಟೇಟಸ್ಗಳಿಗೆ ಮೈಪರಚಿಕೊಂಡ ಪೊಲೀಸರು ಅವರನ್ನು ಬಂಧಿಸಿ ಇಡಿಯ ಘಟನೆಯನ್ನು ಅವರ ತಲೆಗೆ ಕಟ್ಟುವ ಪ್ರಯತ್ನ ಮಾಡಿದರು. ಛೀ! ಇದು ಅತ್ಯಂತ ನಾಚಿಗೇಡಿನ ಸಂಗತಿ. ಬಾಳಾಠಾಕ್ರೆಯವರು ತೀರಿಕೊಂಡಾಗ ಮುಂಬೈ ಹುಡುಗಿ ಹಾಕಿಕೊಂಡಿದ್ದ ಸ್ಟೇಟಸ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದ, ವಾಕ್ ಸ್ವಾತಂತ್ರ್ಯದ ಮಾತನಾಡಿದ್ದ ಎಡಪಂಥದ ಮಿತ್ರರೆಲ್ಲರೂ ಈಗೇಕೋ ಮುಗುಮ್ಮಾಗಿದರು.
ಹಾಗೆ ನೋಡಿದರೆ ವಾದಕ್ಕೆ ಬಗ್ಗದವರನ್ನು ಕೊಂದುಬಿಡುವ ಜಾಯಮಾನ ಈ ಧೂರ್ತ ಎಡಪಂಥೀಯರದೇ. ಕ್ರಿಶ್ಚಿಯನ್ನರು ಮುಸಲ್ಮಾನರದ್ದೇ. ಸುಮ್ಮನೆ ನಿಮ್ಮ ಮಾಹಿತಿಗಿರಲಿ ಅಂತ ಹೇಳೋದು. ಬಾಂಗ್ಲಾದಲ್ಲಿ ಅದಾಗಲೇ ನಾಲ್ಕು ಸ್ವತಂತ್ರ ಬ್ಲಾಗರ್ಗಳ ಕಗ್ಗೊಲೆಯಾಗಿಹೋಗಿದೆ. ಅವರೆಲ್ಲ ಮುಕ್ತವಾಗಿ ಇಸ್ಲಾಂನ ವಿರೋಧಿಸಿ ಬರಹಗಳನ್ನು ಬರೆದವರು. ಸಲ್ಮಾನ್ ರಶ್ದಿ, ತಸ್ಲೀಮಾ ಇಂದಿಗೂ ಭಯದ ನೆರಳಲ್ಲಿಯೇ ಕಾಲ ದೂಡುತ್ತಿದ್ದಾರೆ. ನಾಗಾಲಾಂಡಿನಲ್ಲಿ, ಮಿಜೋರಾಂಗಳಲ್ಲಿ ತಮಗಾಗದವರನ್ನು ಕೊಲ್ಲುವ ಪೃಥೆ ಕ್ರಿಶ್ಚಿಯನ್ ಮಿಶನರಿಗಳಿಗೆ ಇದ್ದೇ ಇದೆ. ಇನ್ನೂ ಬಂಗಾಳ ಮತ್ತು ಕೇರಳಗಳಲ್ಲಿ ಎಡಪಂಥೀಯರು ಅಕ್ಷರಶಃ ಗೂಂಡಾಗಳೇ. ಸಂಘದ ಅದೆಷ್ಟು ಕಾರ್ಯಕರ್ತರ ಹತ್ಯೆ ಮಾಡಿ ರಕ್ತದಲ್ಲಿ ಕೈ ತೊಳೆದು ಹೋಗಿದ್ದಾರೋ ಈ ಪಾಪಿಗಳು ದೇವರೇ ಬಲ್ಲ. ರಷ್ಯಾದ ದೊರೆಗಳಿಂದ, ಚೀನಾದ ಸವರ್ಾಧಿಕಾರಿಗಳಿಂದ ಪಾಠ ಕಲಿತವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಹೇಳಿ.
ಶಾಂತವಾಗಿರುವ ಕನರ್ಾಟಕದಲ್ಲಿ ಬಿರುಗಾಳಿಯೆಬ್ಬಿಸುವ ಪ್ರಯತ್ನ ಅವರು ಯಾವಾಗಲೂ ಮಾಡುತ್ತಲೇ ಇರುತ್ತಾರೆ. ಹಿಂದೂಗಳಿಗೆ ನೋವಾಗುವಂತಹ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಆಗೆಲ್ಲ ಪ್ರತಿಯೊಬ್ಬ ಹಿಂದೂ ಆಕ್ರೋಶಗೊಳ್ಳತ್ತಾನೆ. ಅದನ್ನು ಸಾತ್ವಿಕ ಶಕ್ತಿಯಾಗಿ ಪರಿವತರ್ಿಸಿಕೊಂಡು ಮುನ್ನಡೆಯುತ್ತಾನೆ. ಇಲ್ಲವಾದಲ್ಲಿ ಕೃಷ್ಣನನ್ನು ಕ್ರೂರಿ ಎಂದ ಭಗವಾನನು, ಕ್ರೈಸ್ತಧರ್ಮ ಜಗವನ್ನೂ ಆಕ್ರಮಿಸಲೆಂದ ದೇಜಗೌ ಹೀಗೆ ನೆಮ್ಮದಿಯಿಂದ ಇರಲು ಸಾಧ್ಯವೇ ಇರಲಿಲ್ಲ. ಕುವೆಂಪುರವರ ಶಿಷ್ಯರೆಂದುಕೊಳ್ಳುವ ದೇಜಗೌ, ಅವರ ಸಾಹಿತ್ಯಗಳಿಗೆ ಮನಸ್ಸನ್ನೂ ತೆರೆದುಕೊಂಡಿದ್ದರೆ ಚೆನ್ನಾಗಿತ್ತು. ಪ್ರಾದಿಯ ಮಗಳು ಕ್ರಿಸ್ತನತ್ತ ತರುಣರನ್ನು ಸೆಳೆಯಲು ಮಾಡುವ ಪ್ರಯತ್ನ ಗೊತ್ತಾಗುತ್ತಿತ್ತು. ಹೋಗಲಿ. ‘ಕ್ರೈಸ್ತ ಧರ್ಮ ಆಕ್ರಮಿಸಲಿ’ಎಂದರಲ್ಲ; ‘ಆಕ್ರಮಣ’ ಪದ ಪ್ರಯೋಗ ಸರಿಯೇ? ಎಂಬ ಪದಕ್ಕೆ ಅವರ ಬಳಿ ಉತ್ತರವಿರಲಿಕ್ಕಿಲ್ಲ. ಇಷ್ಟಾದರೂ ಹಿಂದೂ ಸುಮ್ಮನಿರುತ್ತಾನೆ. ಅವನಿಗೆ ಋಷಿಗಳ ಕಾಲದಿಂದಲೂ ಕಲಿಸಿಕೊಟ್ಟಿರುವ ಪಾಠ ಒಂದೇ. ‘ಸತ್ಯ ಶಾಶ್ವತವಾಗಿ ನಿಲ್ಲುತ್ತದೆ; ಸುಳ್ಳು ಕ್ಷಣಕಾಲ ಮೆರೆದು ಕಾಣೆಯಾಗಿಬಿಡುತ್ತದೆ’ ಅದಕ್ಕೇ ಸನಾತನ ಧರ್ಮ ಹತ್ತು ಸಾವಿರ ವರ್ಷಗಳ ನಂತರವೂ ಎದೆಯೆತ್ತಿ ನಿಂತಿರೋದು. ಸತ್ಯದ ತಾಕತ್ತು ಅದು!
ಹೀಗಾಗಿಯೇ ಎಸೆದ ಕಲ್ಲುಗಳು ನಮಗೆ ಭವ್ಯ ಅರಮನೆ ಕಟ್ಟುವಲ್ಲಿ ಅಡಿಪಾಯಕ್ಕೆ ಬಳಕೆಯಾಗುತ್ತವೆ. ಭಗವಾನ್ ಗೀತೆಯನ್ನು ಜರಿದ ಮೇಲೆ ಅನೇಕ ತರುಣರಿಗೆ ಗೀತೆಯಲ್ಲಿ ಆಸಕ್ತಿ ಹುಟ್ಟಿತು. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆತುರದಲ್ಲಿ ಹೊಸ ಪೀಳಿಗೆ ಹಿಂದೂ ಧರ್ಮದ ಅಪರೂಪದ ಲೋಕಕ್ಕೆ ತೆರೆದುಕೊಂಡಿತು. ಓಹ್! ಹೊಸಕೊಂಡಿಗೆ ಮೆತ್ತಿದ್ದ ಕಿಲುಬು ಸ್ವಚ್ಛವಾಯ್ತು. ಎಲ್ಲವೂ ಭಗವಾನನದ್ದೇ ಕೊಡುಗೆ. ಇಂತಹ ಭಗವಾನ್ ಅಕಸ್ಮಾತ್ ತೀರಿಕೊಂಡರೆ ಹಿಂದೂ ಸಮಾಜಕ್ಕೆ ಬಲು ದೊಡ್ಡ ನಷ್ಟ. ಏನಾದರು ಅವಘಡವಾದರಂತೂ ತುಂಬಲಾಗದ ನಷ್ಟ. ಹೀಗಿದ್ದ ಮೇಲೆ ಹಿಂದೂ ಕೊಲ್ಲುವ ಕೆಲಸ ಯಾಕಾದರೂ ಮಾಡಬೇಕು ಹೇಳಿ. ಭಗವಾನನ್ನು ಬಿಡಿ. ಕೆಲವರಂತೂ ಅದಾಗಲೇ ಕುಡಿದು, ಸಿಗರೇಟು ಸೇದಿ ತಾವೇ ಸಾಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಉರುಳಲಿರುವ ಒಣಕಲು ಮರವನ್ನು ಕಡಿದು ಸಾಧನೆಯ ಗರಿಯನ್ನು ಕಿರೀಟಕ್ಕೇರಿಸಿಕೊಳ್ಳುವ ದದರ್ು ಹಿಂದೂ ಮಿತ್ರರಿಗಂತೂ ಇಲ್ಲ.
ಇವೆಲ್ಲ ಮತ್ತೆ ಎಡಚ ಬುದ್ಧಿ ಜೀವಿಗಳಿಗೇ ಅಂಟಿಕೊಂಡಿರುವ ರೋಗ. ಫೇಸ್ಬುಕ್ಕಿನಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ.
ಇರಲಿ, ಇರಲಿ. ಎದುರಿಸೋಣ. ಅಲೆಕ್ಸಾಂಡರಿನಿಂದ ಹಿಡಿದು ಮುಷರ್ರಫ್ನವರೆಗೆ ಬಾಹ್ಯ ಆಕ್ರಮಣಗಳನ್ನೆದುರಿಸಿದ್ದೇವೆ. ಚಾವರ್ಾಕನಿಂದ ಶುರು ಮಾಡಿ ಓಶೋವರೆಗಿನ ಆಂತರಿಕ ಆಘಾತಗಳಿಗೂ ಗುರಾಣಿಯಾಗಿದ್ದೇವೆ. ಇನ್ನು ಇವೆಲ್ಲ ಯಾವ ಲೆಕ್ಕ?
ಛೇ! ಹೇಳಬೇಕಾದ್ದನ್ನೇ ಮರೆತೆ. ಡಾ|| ಕಲಬುಗರ್ಿಯವರು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಹಂಪಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವರ ಕೊಡುಗೆಯೂ ಬಲು ದೊಡ್ಡದು. ಆದರೆ ಅವರಿರುವ ಸ್ಥಾನದ ದೃಷ್ಟಿಯಿಂದ ಒಂದಷ್ಟು ಆಡಬಾರದ ಮಾತುಗಳನ್ನು ಅವರು ಆಡಿ ಅನೇಕರ ಮನ ನೋಯಿಸಿದರು. ಹಾಗಂತ ಅದು ಕೊಲೆ ಮಾಡುವಂತಹ ಆಪಾದನೆಯಲ್ಲ. ಹಿಂದೂ ಸಮಾಜ ಹಾಗೆ ಮಾಡುವುದೂ ಇಲ್ಲ; ಮಾಡಿದವರನ್ನು ಅನುಮೋದಿಸುವುದೂ ಇಲ್ಲ. ಇವೆಲ್ಲ ಆಳುವ ಸಕರ್ಾರದ ಧೂರ್ತ ಕಾಣ್ಕೆಗಳು ಅಷ್ಟೇ. ಇಲ್ಲವಾದಲ್ಲಿ ಫೇಸ್ಬುಕ್ ಪೋಸ್ಟ್ಗಳನ್ನು ಅನುಸರಿಸಿ ಹಿಂದೂ ಸಂಘಟನೆಗಳನ್ನು ಕೊಲೆಗಡುಕರೆಂದು ಬಿಂಬಿಸುವಷ್ಟು ದೈನೀಯ ಸ್ಥಿತಿಗೆ ತನಿಖೆ ಬರಬಾರದಿತ್ತು.
ಒಂದಂತೂ ನೆನಪಿಡಿ. ನೈಜ ಹಿಂದೂ ತನ್ನನ್ನು ವಿರೋಧಿಸುವವನನ್ನು ಕೊಲ್ಲುವುದಿರಲಿ, ಹೊಡೆಯಲಾರ ಕೂಡ. ಇಷ್ಟಾದ ಮೇಲೂ ಹಿಂದೂ ಸಂಘಟನೆಯೇ ಇದನ್ನ ಮಾಡಿದೆ ಎಂದು ತನಿಖೆಗಳು ನಿರ್ಧರಿಸುವುದಾದರೇ ಒಂದೇ ತನಿಖೆ ದಿಕ್ಕು ತಪ್ಪಿದೆ ಅಥವಾ ಆ ಸಂಘಟನೆ ಹಾದಿ ಬಿಟ್ಟಿದೆ ಅಂತರ್ಥ. ನಿಸ್ಸಂಶಯವಾಗಿ!!