Archive for the ‘ಪಿಕ್ ಪಾಕೆಟ್’ Category

ನಾನು ತುಂಬಾ ಇಷ್ಟಪಟ್ಟ ಸಂಭಷಣೆ ಇದು.ವಿದ್ಯಾರ್ಥಿ ಮತ್ತು  ಶಿಕ್ಷಕನ ನಡುವಿನದ್ದು. ವಿದ್ಯಾರ್ಥಿ ಬಲು ಚುರುಕು. ಶ್ರದ್ಧಾವಂತ. ಆದರೆ ಶಿಕ್ಷಕ ಒಬ್ಬ ತರ್ಕ ಪಂಡಿತ. ಹೀಗಾಗಿ ನಾಸ್ತಿಕ.  ಆತ ದೇವರಿಲ್ಲ ಅಂತ ವಾದಿಸೋದನ್ನೇ – ನಂಬಿಸೋದನ್ನೇ ವೃತ್ತಿಯಾಗಿಸ್ಕೊಂಡಿದ್ದ.

ಅದೊಮ್ಮೆ ತರಗತಿಯಲ್ಲಿ ಬಿರುಸಿನ ಚರ್ಚೆ. “ನೀನು ದೇವರನ್ನು ನಂಬ್ತೀಯಾ?” ಕೇಳಿದ. ” ಖಂಡಿತವಾಗಿಯೂ” ವಿದ್ಯಾರ್ಥಿಯ ಉತ್ತರ. ” ದೇವರು ಒಳ್ಳೆಯವನಾ? ಶಕ್ತಿವಂತನಾ?” ಮತ್ತೊಂದು ಪ್ರಶ್ನೆ. ” ಹೌದು” ಬಾಲಕನ ಮುಗ್ಧ ವಾಗಿ ತಲೆಯಾಡಿಸಿದ.

ಶಿಕ್ಷಕ ತನ್ನ ವರಸೆ ತೆಗೆದ. ” ನನ್ನ ಸಹೋದರನಿಗೆ ಕ್ಯಾನ್ಸರ್ ಬಂದಿತ್ತು. ಆತ ದೇವರನ್ನು ಪ್ರಾರ್ಥಿಸಿದ. ನಮ್ಮಲ್ಲಿ ಬಹಳಷ್ಟು ಜನ ಹುಷಾರಿಲ್ಲದವರಿಗೆ ಸಹಾಯ ಮಾಡುತ್ತೇನಲ್ವೇ? ಆದರೆ ಆ ದೇವರು ಮಾಡಲಿಲ್ಲ. ಹಾಗಿದ್ದ ಮೇಲೆ ಆತ ದೇವರು ಹೇಗೆ?ಈ ಪ್ರಶ್ನೆಗೆ ಏನುತ್ತರ ಕೊಡ್ತೀರಿ?” ಆ ಹುಡುಗ ಶಾಂತವಾಗಿಯೇ ಇದ್ದ. ಮತ್ತೆ ಅವನೇ ಮುಂದುವರೆಸಿದ. “ಉತ್ತರ ಇಲ್ವಲ್ಲಾ? ಹೋಗಲಿ, ಈಗ ಹೇಳಿ. ರಾಕ್ಷಸರು ಒಳ್ಳೆಯವರಾ? ಕೆಟ್ಟವರಾ?”  ಹುಡುಗಿಯೊಬ್ಬಳು ನಿಂತು, ’ಕೆಟ್ಟವರು’  ಅಂದಳು. ಮುಖದಲ್ಲಿ ಸರಿ ಉತ್ತರ ಹೇಳಿದ ಹೆಮ್ಮೆ.  ’ ಹಾಗಾದರೆ ಅವರು ಬಂದಿದ್ದೆಲ್ಲಿಂದ?’ ಚಾಲಾಕಿ ಶಿಕ್ಷಕನ ಪ್ರಶ್ನೆ. ಈ ಪ್ರಶ್ನೆಗೂ ಅದೇ ಬಾಲಕಿ ಎದ್ದು ನಿಂತು, ’ದೇವರಿಂದ’ ಅಂದಳು.

ಮತ್ತೆ ಶಿಕ್ಷಕನ ಸರದಿ. ” ದುಷ್ಟ ಶಕ್ತಿ ಎಲ್ಲೆಲ್ಲೂ ಇದೆ, ಮತ್ತು ಅದನ್ನು ದೇವರೇ ಸೃಷ್ಟಿಸ್ತಾನೆ. ಅಂದ ಮೇಲೆ ದುಷ್ಟ ಶಕ್ತಿಯ ಒಡೆಯನೂ ಅವನೇ ಅಲ್ವೇ?”

ಇದಿಯ ತರಗತಿ ಸ್ತಬ್ಧವಾಯ್ತು.ಶಿಕ್ಷಕರು ಮುಂದುವರೆಸ್ತಾ ಚಿಕ್ಕ ಭಾಷಣವನ್ನೇ ಮಾಡಿದರು. ಅನಾರೋಗ್ಯ,ಅಪ್ರಮಾಣಿಕತೆ, ದ್ವೆಷ, ಕುರೂಪಿತನ, ಇವೆಲ್ಲ ರೋಗಿಷ್ಟ ಅಂಶಗಳು ಸಮಾಜದಲ್ಲಿ ಇವೆಯಲ್ಲವೇ? ಇವೆಲ್ಲದರ ಕಾರಣಕರ್ತನೂ ಭಗವಂತನೇ ಅಲ್ವೇ?

ಊಹೂಂ… ಯಾರೊಬ್ಬರಿಂದಲೂ ಉತ್ತರವಿಲ್ಲ. ಭಾಷಣ ಮುಂದುವರೆಯಿತು. ” ವಿಜ್ಞಾನ ಹೇಳುವಮ್ತೆ ಸುತ್ತಲಿನ ಆಗುಹೋಗುಗಳನ್ನು ಅರಿಯಲು ಐದು ಇಂದ್ರಿಯಗಳಿವೆ. ಆ ಇಂದ್ರಿಯಗಳ ಅರಿವಿಗೆ ಬಾರದಿದ್ದದ್ದು ಸತ್ಯವಲ್ಲ. ಈಗ ಹೇಳಿ. ನೀವು ದೇವರನ್ನು ನೋಡಿದ್ದೀರಾ? ಅವನ ಮಾತು ಕೆಳಿದ್ದೀರಾ? ಅವನ ನ್ನು ಮುಟ್ಟಿದ್ದೀರಾ? ಮೂಸಿದ್ದೀರಾ? ನೆಕ್ಕಿರ್ುಚಿ ನೋಡಿದ್ದೀರಾ!?ಶಿಕ್ಷಕನ ದನಿ ಏರುತ್ತ ಹೋಯ್ತು. ಹುಡುಗರುಮ ಮಿಸುಕಾಡಲಿಲ್ಲ.  ಕೊನೆಗೆ ತಾನೇ, ” ವಿಜ್ಞಾನದ ಯಾವ ವಿಧಿ-ವಿಧಾನವೂ ದೆವರ ಇರುವಿಕೆ ಸಾಬೀತುಪಡಿಸುವುದಿಲ್ಲವಾದ್ದರಿಂದ, ದೇವರು ಇರುವುದು ಸಾಧ್ಯವೇ ಇಲ್ಲ!” ಎಂದು ಷರಾ ಬರೆದುಬಿಟ್ಟ.

 ಒಂದರೆ ಕ್ಷಣ ಮೌನ. ಹಿಂದಿನ ಸಾಲಲ್ಲಿ ಕುಳಿತಿದ್ದ ಹುಡುಗ ಮೆಲ್ಲನೆ ಎದ್ದು ನಿಂತು, “ಸಾರ್” ಅಂದ. ಇಡೀ ತರಗತಿ ಅವನತ್ತ ತಿರುಗಿತು. ಹುಡುಗ ಕಣ್ಣಗಲಿಸಿ, ” ಸರ್, ಬಿಸಿ ಅನ್ನೋದು ಇದೆಯಾ? “ಅಂದ.

“ಹೌದು” ಶಿಕ್ಷಕನ ಉತ್ತರ.

“ಮತ್ತೆ… ತಣ್ಣಗಿರೋದು ಅಂತಲೂ ಇದೆಯಾ?”

“ಹೌದು”

ಈಗ ಹುಡುಗ ಕೊಂಚ ದನಿ ಎತ್ತರಿಸಿದ. ” ಅದು ತಪ್ಪು. ತಣ್ಣಗಿರೋದು ಅನ್ನುವ ವಸ್ತು ಯವುದೂ ಇಲ್ಲವೆ ಇಲ್ಲ. ಬಿಸಿ, ಹೆಚ್ಚು ಬಿಸಿ, ಅತೀವ ಬಿಸಿ, ಕಡಿಮೆ ಬಿಸಿ, ಬಿಸಿಯೇ ಅಲ್ಲದ್ದು ಅಂತ ಇದೆಯೆ ಹೊರತು, ತಣ್ಣಗಿರೋದು ಅಂತ ಯವ್ದೂ ಇರೋಲ್ಲ! ತಣ್ಣಗೆ ಅನ್ನೋದನ್ನ ನಾವು ಬಿಸಿಯಲ್ಲದ್ದು ಅನ್ನೋದಕ್ಕೆ ಪರ್ಯಾಯವಾಗಿ ಬಳಸ್ತೀವಿ. ಉಷ್ಣ ಶಕ್ತಿ, ಶೀತ ಶಕ್ತಿಯಲ್ಲ, ವಿರುದ್ಧವೂ ಅಲ್ಲ. …”

ಹುಡುಗ ಹಾಗೆ ವಾದ ಮಾಡ್ತಿದ್ದರೆ, ಶಿಕ್ಷಕರು ಕಣ್ಣರಳಿಸುತ್ತಾ ಕುಳಿತಿದ್ದರು.

ಹುಡುಗ ಮತ್ತೆ ಕೇಳಿದ.” ಕತ್ತಲು ಇದೆಯೇ?”

ಶಿಕ್ಷಕ “ಹೌದು” ಅಂದ.

ಮತ್ತೆ ಹುಡುಗನ ವಾದ. ” ಕತ್ತಲು ಅಂದ್ರೆ, ಬೆಳಕಿಲ್ಲ ಅಂತ ಹೇಳೋದಕ್ಕೆ ಬಳಸೋ ಪದ. ಅದು ಬೆಳಕಿನ ವಿರುದ್ಧ ಪದ ಅಲ್ಲ.”

 ಈಗ ಶಿಕ್ಷಕನ ತಲೆ ಕೆಟ್ಟಿತು. ” ನೀನು ಹೇಳ ಹೊರಟಿರೋದು ಏನು?” ದಬಾಯಿಸಿದರು.

” ಸರ್. ನಿಮ್ಮ ತರ್ಕದ ಸರಕು ಮುಗಿದಿದೆ. ನಿಮ್ಮ ವಿಜ್ಞಾನ ಅಯಸ್ಕಾಂತದ ಆಕರ್ಷಣೆಯನ್ನು ನೋಡಿದೆಯೇ? ಆದರೆ ಅದನ್ನು ಬಳಸುತ್ತೀರಲ್ಲ, ಹೇಗೆ? ವಿದ್ಯುತ್ತಿನ ಬಣ್ಣ, ರೂಪಗಳನ್ನು ಕಂಡವರುಂಟೇ? ಮೂಸಿದವರುಂಟೇ? ಋಚಿ ನೋಡಿದವರುಂಟೇ?  ಆದರು ವಿದ್ಯುಚ್ಚಕ್ತಿಯನ್ನು ನಂಬುತ್ತೀರಲ್ಲ, ಬಳಸುತ್ತೀರಲ್ಲ? ಹೇಗೆ?  ಸಾವನ್ನು ಬದುಕಿನ ವಿರುದ್ಧ ಪದ ಅಂತ ತಿಳಿಯೋದು ಮೂರ್ಖತನವಲ್ಲವೇ?

ಶಿಕ್ಷಕನಿಗೆ ತಾನು ಸೋಲುತ್ತಿರುವ ಅರಿವಾಯಿತು.  ಹುಡುಗ ಧೈರ್ಯದಿಂದ ಮುಂದುವರೆದ.

ಇಲ್ಲಿ ನೀವು ಯಾರಾದರೂ ನಮ್ಮ ಶಿಕ್ಷಕರ ಮೆದುಳು ನೋಡಿದ್ದೀರಾ? ”

ಶಾಲೆಗೆ ಶಾಲೆಯೇ ಬಿದ್ದು ಬಿದ್ದು ನಗತೊಡಗಿತು. ” ಅವರ ಮೆದುಳಿನ ಅಂದ- ಆಕಾರ ಕಂಡಿದ್ದೀರಾ? ಋಚಿ ನೋದಿದ್ದೀರಾ?”  ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ಮೆದುಳು ಅವರಿಗೆ ಎಂದು ತಿಳಿಯುವುದರೂ ಹೇಗೆ?”

” ಅದು ನಂಬಿಕೆ” ಶಿಕ್ಷಕ ಬಾಯಿ ಹಾಕಿದ. ಅದಕ್ಕೇ ಕಾಯುತ್ತಿದ್ದವನಂತೆ ಹುಡುಗ ತತ್ ಕ್ಷಣ ಹೇಳಿದ, ” ಮಾನವ ಮತ್ತು ದೇವರ ನಡುವೆ ಇರುವುದೂ ಅದೇ ನಂಬಿಕೆ!”

ಈಗ ಶಿಕ್ಷಕನ ಸಮರ್ಥನೆಗೆ ಮಾತುಗಳೇ ಉಳಿದಿರಲಿಲ್ಲ. ವಿದ್ಯಾರ್ಥಿ ಹೇಳಿದ ಹಾಗೆ, ಅವನ ತರ್ಕದ ಸರಕು ಮುಗಿದಿತ್ತು.

ಹೀಗೆ ಅತ್ಯಂತ ಶಿಸ್ತುಬದ್ಧ ವಾದ ಸರಣಿಯಿಂದ ಶಿಕ್ಷಕನ ಬಾಯ್ಮುಚ್ಚಿಸಿ ದೇವರ ಇರುವಿಕೆಯನ್ನ ಎತ್ತಿಹಿಡಿದವರು ಯಾರು ಗೊತ್ತೇ? ಅವರು ’ ಆಲ್ಬರ್ಟ್ ಐನ್’ ಸ್ಟೀನ್!

ವಿಜ್ಞಾನ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಐನ್ ಸ್ಟೀನ್, ಎಂದೂ ದೇವರನ್ನು ಹಳಿದವನಲ್ಲ. ಅವನು ಮಾತ್ರವಲ್ಲ, ನಿಜವಾದ ವಿಜ್ಞಾನಿಗಳೆಲ್ಲರಿಗೂ ವಿಜ್ಞಾನದ, ಮಾನವನ ಮಿತಿಗಳ ಅರಿವಿರುತ್ತದೆ. ಹೀಗಾಗಿಯೇ ಬಹುತೇಕ ಸುಪ್ರಸಿದ್ಧ ವಿಜ್ಞಾನಿಗಳು ಆಸ್ತಿಕರು. ಶ್ರದ್ಧಾವಂತರು. ಆದರೆ ಅರೆ ಬೆಂದ ನಮಗೆ ಅದು ಅರ್ಥವಾಗೋದೇ ಇಲ್ಲ. ಯಂತ್ರಗಳು, ಭೂಗೋಳ- ಖಗೋಳಗಳು, ಆವಿಶ್ಕಾರಗಳಷ್ಟೇ ವಿಜ್ಞಾನ ಅನ್ನುವ ಭಾವನೆ ನಮ್ಮದು ರೈತ ಹೊಲ ಉಳುವಾಗ ನೇಗಿಲೆಳೆಯುವುದೂ ವಿಜ್ಞಾನ ಅನ್ನೋದನ್ನ ಅರಗಿಸಿಕೊಳ್ಳಲು ನಮ್ಮಿಂದಾಗದು. ಕಡಿದಾದ ರಸ್ತೆಯಲ್ಲಿ ಗಾಡಿ ಓಡಿಸುವವ ಬಾಗೋದು ಸೆಂಟ್ರಿಫ್ಯುಗಲ್ ಫೋರ್ಸಿಗೆ ಉದಾಹರಣೆ ಅಂದರೆ ತೃಪ್ತಿಯಾಗದು. ನಮ್ಮ ಪಾಲಿಗೆ ವಿಜ್ಞಾನ, ದೈನಂದಿನ ಜಗತ್ತಿಗೆ ದೂರವಿರುವ, ಆವಿಷ್ಕಾರಗಳ ಸಿದ್ಧಾಂತ. ವಿಜ್ಞಾನ- ಶುದ್ಧ ನಾಸ್ತಿಕವಾದ!

ಐನ್ ಸ್ಟೀನ್ ನನ್ನು, ಅವನಂಥ ಶ್ರದ್ಧಾ-ವಿಚಾರವಂತ ವಿಜ್ಞಾನಿಗಳನ್ನು ಸಾಕಷ್ಟು ನೋಡಿದ್ದರೂ, ಈಗಲೂ ನೋಡುತ್ತಿದ್ದರೂ ನಮಗೆ ಮಾತ್ರ ಬುದ್ಧಿ ಬರುವುದೇ ಇಲ್ಲ. ನಾವು, ತುಂಬಿದ ಕೊಡಗಳಾಗಲು ಸಾಧ್ಯವೇ ಇಲ್ಲ!!

 ಚಕ್ರವರ್ತಿ ಸೂಲಿಬೆಲೆ ಬರಹ ಸಂಗ್ರಹದಿಂದ ಕದ್ದಿದ್ದು.