ಹೀಗೇ, ಕಥೆ ಹೇಳುವಾ ಅಂತ….

Posted: ಜನವರಿ 25, 2008 in ನಿಮ್ಮೊಂದಿಗೆ

ಹೆಲೋ!

ನಾವು ಇವತ್ತು ತಾನೇ ಇಂಥದೊಂದು ಪೋಸ್ಟ್ ಹಾಕಬೇಕು ಅಂತ ಡಿಸೈಡ್ ಮಾಡಿದ್ವಿ. ಅಷ್ಟರಲ್ಲೇ ಟೀನಾ ಮುದ್ದಾಗಿ ಗದರಿಬಿಟ್ಟಿದ್ರು!

ಇರಲಿ. ಜೀವದನಿ ಮತ್ತೆ ತನ್ನ ಸದ್ದು ಕೇಳಿಸ್ಲಿಕ್ಕೆ ತಯಾರಾಗ್ತಾ ಇದೆ.
ಆದ್ರೆ, ಈ ಸಾರ್ತಿ ನಮ್ಮ ಥೀಮ್ ನಲ್ಲಿ ಕೊಂಚ ಬದಲಾವಣೆ. ನಿಮ್ಮನ್ನ ಹಾಗೇ ಕೂರಿಸ್ಕೊಂಡು ಒಂದಷ್ಟು ಕಥೆಗಳನ್ನ ಹೇಳುವಾ ಅಂತ! ಹಾಗೇ ಹಳೆಯ ’ಗಂಡಸ್ರ ಗೋಳು’ ಮುಂದುವರೆಯಲಿದೆ. ಉಳಿದ ಕಾಲಂ ಲೇಖಕರೆಲ್ಲ ಕೈ ಕೊಟ್ಟು ಬಿಟ್ಟಿದಾರೆ! ಹೀಗಾಗಿ, ಹಳೆಯ ಇನ್ಯಾವ ಕ್ಯಟಗರಿಯೂ ಇನ್ನು ಇರೋಲ್ಲ. ಕವಿತೆ, ಅನುವಾದಗಳು ಆಗೀಗ ಹಣಕಬಹುದಷ್ಟೆ!
ನಾವೆಲ್ಲ ಬೆಳೀವಾಗ ಅದೆಷ್ಟು ಕಥೆಗಳನ್ನ ಕೇಳಿಲ್ಲ, ಅದೆಷ್ಟು ಕಥೆ ಕಟ್ಟಿ ಹೇಳಿಲ್ಲ!? ಇವತ್ತಿನ ಧಾವಂತದಲ್ಲಿ ಅವೆಲ್ಲ ಮರೆತೇಹೋಗ್ಬಿಟ್ಟಿದೆ ಅಲ್ವಾ?
ಅದ್ಕೇ ನಾವೀಗ ಅಂಥ ಕಥೆಗಳನೆಲ್ಲ ಗುಡ್ಡೆ ಮಾಡ್ಕೊಂಡು ಕೂತಿದೀವಿ. ನೀವೂ ಇದರಲ್ಲಿ ಸಾಥ್ ಕೊಡ್ತೀರ?

ನಾವು ಇವನ್ನೆಲ್ಲ ಹೇಳಬೇಕೂಂತ ಇದೀವಿ…

ಪುರಾಣಗಳ ಸಾವಿರ ಸಾವಿರ ಹೆಂಡತಿಯರ ರಾಜ, ಸಾವಿರ ಕೈಗಳ ವೀರ, ಮೈಯೆಲ್ಲ ಕಣ್ಣಿನ ದೇವೇಂದ್ರ, ಲಕ್ಷ ಲಕ್ಷ ವರ್ಷಗಟ್ಟಲೆ ಬಾಳಿದ, ರಾಜ್ಯವಾಳಿದ ಅರಸರು!! ಒಂದಕ್ಕಿಂತ ಒಂದು ರಸಕವಳದಂಥ ಕಥೆಗಳು.
ಜೊತೆಗೆ, ಬಾಯಿಂದ ಬಾಯಿಗೆ ಹರಿಯುತ್ತ ಹೊಸಹೊಸ ರೂಪ, ಆಯಾಮ ಪಡೆದುಕೊಳ್ತಾ ನಮ್ಮನ್ನ ಬೆರಗಿಗೆ ನೂಕೋ ಜಾನಪದ ಕಥೆಗಳು…
ನಮ್ಮ ದೇಶದಲ್ಲಿ ಆಗಿಹೋದ ಮಹಾಮಹಾತ್ಮರ ಕಥೆಗಳು….

ಹೆದರಿಕೊಳ್ಬೇಡಿ, ಎಲ್ಲ ಪುಟಾಣಿ ಪುಟಾಣಿಯಾಗೇ ಇರುತ್ತೆ!
ಹೇಳೋಕೆ ನಾವ್ ರೆಡಿ. ಕೇಳೋಕೆ ನೀವ್ ರೆಡೀನಾ?

ನಲ್ಮೆ,

ಜೀವದನಿ ಬಳಗ

ಟಿಪ್ಪಣಿಗಳು
  1. Tina ಹೇಳುತ್ತಾರೆ:

    ಅಬ್ಬ!
    ಜೀವಕ್ಕೆ ದನಿ ಬಂದ ಹಾಗಾಯ್ತು ನೋಡಿ ಈಗ! ತುಂಬ ಚೆನ್ನಾಗಿ ಬೆಳೀತಿದ್ದ ಬ್ಲಾಗೊಂದು ಗಕ್ಕಂತ ನಿಂತುಹೋದ್ರೆ ಹೇಗಾಗಬೇಡ? ಜೀವದನಿಯ ಎಲ್ಲ ಪ್ರಯತ್ನಗಳಿಗೂನೂ ನಮ್ಮಂಠ ಸ್ನೇಹಿತ/ತೆಯರ ಸಾಥ್ ಇದ್ದೇ ಇರುತ್ತೆ. ಅದು ಪುಟಾಣಿಯಾಗಿರಲಿ, ಬ್ರಹತ್ತಾಗಿರಲಿ, ಏನೇ ಆಗಿರಲಿ!
    ಅಕ್ಕರೆಯೊಡನೆ,
    ಟೀನಾ.

  2. Chukki ಹೇಳುತ್ತಾರೆ:

    tumba santosha.Kelavomme a kategalanna nenesi kondaga silly annisuttadru, estu maja kodtitalva adu? Kaaturadinda kaitirtini ododikke.

ನಿಮ್ಮ ಟಿಪ್ಪಣಿ ಬರೆಯಿರಿ